ಚಳಿಗಾಲ ಬಂದಾಗ ಜತೆಗೇ ಹಲವು ಆರೋಗ್ಯ ಸಮಸ್ಯೆಗಳು ಸಹ ಬರುತ್ತವೆ. ಆಗೊಮ್ಮೆ ಈಗೊಮ್ಮೆ ಕೆಮ್ಮು, ಶೀತ, ಗಂಟಲು ನೋವು, ಜ್ವರ ತಪ್ಪುವುದಿಲ್ಲ. ಹೀಗಾಗಿ ಚಳಿಗಾಲದಲ್ಲಿ ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಸೇವಿಸುವುದು ಮುಖ್ಯ. ಆದರೆ, ಹೆಚ್ಚಿನವರು ಆಹಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ಹೀಗೆ ಹುಷಾರು ತಪ್ಪಿದಾಗ ಇಂಗ್ಲಿಷ್ ಮದ್ದಿನ ಮೊರೆ ಹೋಗುತ್ತಾರೆ.
ಕಹಿ ಕಹಿ ಮಾತ್ರೆಗಳನ್ನು ಕಷ್ಟಪಟ್ಟು ತಿನ್ನುತ್ತಾರೆ. ಆದ್ರೆ, ನೀವು ಇಷ್ಟೆಲ್ಲಾ ಕಷ್ಟ ಪಡ್ಬೇಕಾಗಿಲ್ಲ. ಮಳೆಗಾಲದಲ್ಲಿ ನಿಮ್ಮ ಆಹಾರದಲ್ಲಿ ಕರೇಲಾ ಅಥವಾ ಹಾಗಲಕಾಯಿಯನ್ನು ಸೇವಿಸಿ. ಹಲವು ಆರೋಗ್ಯ ಸಮಸ್ಯೆಗಳಿಗೆ ಇದುವೇ ರಾಮಬಾಣ.
- ಹಾಗಲಕಾಯಿ ರಸ ಚರ್ಮದ ಫಂಗಸ್ ಸೋಂಕನ್ನು ತಡೆಗಟ್ಟುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.
- ಸಂಧಿವಾತದ ನೋವಿನ ಮುಖ್ಯ ಕಾರಣವೆಂದರೆ ರಕ್ತದಲ್ಲಿನ ಕಲ್ಮಶಗಳು. ಹಾಗಲಕಾಯಿ ರಸ ಸೇವನೆಯಿಂದ ರಕ್ತದಲ್ಲಿನ ಕಲ್ಮಶಗಳನ್ನು ತೆಗೆದುಹಾಕುತ್ತದೆ.
- ಹಾಗಲಕಾಯಿ ರಸ ಕುಡಿಯುವುದರಿಂದ ಅತಿಯಾದ ಮದ್ಯ ಸೇವನೆಯ ಅಮಲು ಹೋಗಲಾಡಿಸುತ್ತದೆ. ಜೊತೆಗೆ ಲಿವರ್ನ್ನು ಶುದ್ಧಗೊಳಿಸುತ್ತದೆ.
- ಪ್ರತಿದಿನ ಎರಡು ಚಮಚ ಹಸಿ ಹಾಗಲಕಾಯಿ ರಸವನ್ನು ಸಮಪ್ರಮಾಣದ ಬಿಳಿ ಈರುಳ್ಳಿ ರಸದೊಂದಿಗೆ ಸೇವಿಸಿದರೆ ಕಾಲರಾ ಗುಣವಾಗುತ್ತದೆ. ಮಧುಮೇಹಿಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದರ ರಸವನ್ನು ಅರ್ಧ ಕಪ್ ತೆಗೆದುಕೊಂಡರೆ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚುತ್ತದೆ.
- ಇದು ಪ್ರೊವಿಟಮಿನ್ ಎ ಅಂಶದ ಉತ್ತಮ ಮೂಲವಾಗಿದೆ. ನಿಮ್ಮ ಕಣ್ಣಿನ ಆರೋಗ್ಯ ಮತ್ತು ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.
- ಹಾಗಲಕಾಯಿ ಕ್ಯಾಟೆಚಿನ್, ಗ್ಯಾಲಿಕ್ ಆಸಿಡ್, ಎಪಿಕಟೆಚಿನ್ ಮತ್ತು ಕ್ಲೋರೊಜೆನಿಕ್ ಆಸಿಡ್ನ ಉತ್ತಮ ಮೂಲವಾಗಿದೆ. ಈ ಎಲ್ಲಾ ಶಕ್ತಿಶಾಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ನಿಮ್ಮ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.