ಯಾದಗಿರಿ: ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ಅಕ್ರಮವಾಗಿ ಸೀರೆ, ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬ ಆರೋಪ ಮೇಲೆ ಯಾದಗಿರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ಎಸ್.ಬಿ.ಕಾಮರೆಡ್ಡಿ ಪತ್ನಿ ಪ್ರತಿಮಾ ಕಾಮರೆಡ್ಡಿ ಮನೆ ಹಾಗೂ ಕಚೇರಿ ಮೇಲೆ ಯಾದಗಿರಿ ಪೊಲೀಸರು ದಾಳಿ ನಡೆಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 48 ಸಾವಿರ ರೂ. ಮೌಲ್ಯದ 48 ಸೀರೆ ಹಾಗೂ 3 ಸಾವಿರ ಮೌಲ್ಯದ 5 ನಾನ್ ಸ್ಟಿಕ್ ತವಾಗಳನ್ನು ವಶಪಡಿಸಿಕೊಂಡಿದ್ದಾರೆ.
ಅದೇ ರೀತಿ ಟಿಕೆಟ್ ಆಕಾಂಕ್ಷಿ ಸೇರಿದಂತೆ ಮೂವರ ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು ಡಾ.ಎಸ್.ಬಿ ಕಾಮರೆಡ್ಡಿ, ಡಾ.ಪ್ರತಿಮಾ ಕಾಮರೆಡ್ಡಿ ಹಾಗೂ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಗೂಳಿ ವಿರುದ್ಧ ಕೂಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಮಹಿಳಾ ದಿನಾಚರಣೆ ನೆಪದಲ್ಲಿ ಪ್ರತಿಮಾ ಕಾಮರೆಡ್ಡಿ ಹಾಗೂ ಮಂಜೂಳಾ ಗೂಳಿ ನೇತೃತ್ವದಲ್ಲಿ ಹಂಚಿಕೆ ಮಾಡಲಾಗಿತ್ತು.ಯಾದಗಿರಿ ನಗರದ ಚಂದ್ರಬಾಗಾ ಕಲ್ಯಾಣ ಮಂಟಪದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರಿಗೆ ಸೀರೆ ಹಾಗೂ ನಾನ್ ಸ್ಟಿಕ್ ತವಾ ಹಂಚಿಕೆ ಮಾಡಲಾಗಿತ್ತು.