ಕೆಜಿಎಫ್ ಹೆಸ್ರು ಹೇಳಿದ ತಕ್ಷಣ ಕಣ್ತುಂದೆ ಪಾಸಾಗೋದೇ ರಾಕಿಭಾಯ್..ಯಶ್ ಇಲ್ಲದೇ ಇದ್ರಿ ಕೆಜಿಎಫ್ ಆಗ್ತಾ ಇತ್ತಾ..ನೋ ವೇ..ಯಶ್ ಕೆಜಿಎಫ್ ಸಿನಿಮಾದ ಸುಲ್ತಾನನಾಗಿ ಅಬ್ಬರಿಸಿದ್ರು..ಆಫ್ ಕೋರ್ಸ್..ಅದರ ಹೊರತಾಗಿ ಕೆಜಿಎಫ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬ ಹಠ ತೊಟ್ಟಿದ್ದೇ ಇದೇ ಯಶ್..ಹಠ ತೊಟ್ರೆ ಸಾಲದು ಅದಕ್ಕಾಗಿ 8 ವರ್ಷ ತನು ಮನ ಅರ್ಪಿಸಿ ಹಗಲು ರಾತ್ರಿ ಸಿನಿಮಾದ ಎಲ್ಲಾ ವಿಭಾಗದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡವರು ಇದೇ ಯಶ್..ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೆಜಿಎಫ್ ಗೆಲುವಿನ ಹಿಂದೆ ರಾಕಿಭಾಯ್ ಕೊಡುಗೆ ದೊಡ್ಡದಿದೆ. ಅದನ್ನು ಇಡೀ ಸಿನಿಮಾಲೋಕವೇ ಒಪ್ಪಿಕೊಂಡಿದೆ…ಆದ್ರೆ ಆ ತೆಲುಗು ನಟ ಅಣ್ತಮ್ಮಾನ ಬಗ್ಗೆ ಹೇಳಿರೋ ಊಡಾಫೆ ಮಾತು ರಾಕಿಭಕ್ತಣವನ್ನು ಕೆರಳಿಸಿದೆ.
ಯಶ್ ಸಾಧನೆಯ ಹಾದಿ ಚಿತ್ರಣವನ್ನು ಹೊಸದಾಗಿ ವಿವರಿಸುವ ಅಗತ್ಯವೇ ಇಲ್ಲ..ಝೀರೋ ಟು ಹೀರೋ ಆದವರು ಯಶ್..ಬಸ್ ಕಂಟೆಕ್ಟರ್ ಮಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ ಅಂದ್ರೆ ಅವ್ರ ಪರಿಶ್ರಮಕ್ಕೆ ಇಡೀ ಭಾರತೀಯ ಚಿತ್ರರಂಗ ಚಪ್ಪಾಳೆ ತಟ್ಟಿದೆ. ಬಾಲಿವುಡ್ ನವರೂ ಯಶ್ 1 ನಂಬರ್ ಸ್ಟಾರ್ ಅಂತಾ ಒಪ್ಪಿಕೊಂಡಿದ್ದಾರೆ.
ಅದಕ್ಕೆ ಅಣ್ತಮ್ಮಾನಿಗೆ ಸೆಲ್ಫ್ ಮೇಡ್ ಷಹಾಜಾನ್ ಅನ್ನೋದು..ಯಾವುದೇ ಗಾಢ್ ಫಾದರ್ ಇಲ್ಲದೇ ಎತ್ತರಕ್ಕಿರದ ಯಶ್ ಗೆ ಕೆಜಿಎಫ್ ಸಿಕ್ಕಿದ್ದು ಅದೃಷ್ಟದಿಂದನಾ..? ನೋನೋ..ಗಾಂಧಿನಗರ ಕಡೆ ಇಡೀ ಸಿನಿಮಾಲೋಕ ಚಪ್ಪಾಳೆ ತಟ್ಟುತ್ತಾ ತಿರುಗಿ ನೋಡುವಂತೆ ಮಾಡ್ತೀನಿ ಅಂತಾ ಹೇಳಿದ್ದ ಯಶ್ ಕೆಜಿಎಫ್ ಮೂಲಕ ಅದನ್ನು ಸಾಬೀತುಪಡಿಸಿದ್ದಾರೆ. ನೀಲ್ ಹೇಗೆ ಕೆಜಿಎಫ್ ನ ಒಂದು ಪಿಲ್ಲರ್ ಇದ್ದಂತೆಯೋ..ಯಶ್ ಕೂಡ ಕೆಜಿಎಫ್ ಪಿಲ್ಲರ್ ಗಳಲ್ಲಿ ಒಬ್ಬರು..
ಕೆಜಿಎಫ್ ಸಿನಿಮಾಗಾಗಿ ಯಶ್ ಮುಡಿಪಾಗಿಟ್ಟಿದ್ದು ಬರೋಬ್ಬರಿ 8 ವರ್ಷ.. ಬೆವರು, ರಕ್ತ ಬಸಿದು ಕೆಜಿಎಫ್ ಕೋಟೆ ಕಟ್ಟಿದ ಯಶ್ ಯಾರು? ಆತನ ತಾಕತ್ತೇನು ಅನ್ನೋದು ಖಾನ್ ಗಳ ಖಾನ್ ಸಲ್ಮಾನ್ ಖಾನ್ ಗೆ ಗೊತ್ತು. ಅಂತಹದ್ರಲ್ಲಿ ಆರಕ್ಕೇರ ಮೂರಕ್ಕಿಳಿಯದ ತೆಲುಗಿನ ನಟ ರವಿತೇಜ ಯಶ್ ಗೆ ಕೆಜಿಎಫ್ ಸಿಕ್ಕಿದ್ದು ಅದೃಷ್ಟದಿಂದ ಅನ್ನೋದು..ಹೀಗೆ ಹೇಳಿಕೆ ಕೊಡ್ತಿದ್ದಂತೆ ರಾಕಿಭಾಯ್ ಫ್ಯಾನ್ಸ್ ಹುರಿದುಬಿಳ್ತಾವ್ರೆ..ನಿನ್ನದು ಮೂರು ಸಿನಿಮಾಗಳ ಕಲೆಕ್ಷನ್ 100 ಕೋಟಿ..ನಮ್ಮ ಬಾಸ್ ಕೆಜಿಎಫ್ ಸಿನಿಮಾದ ಒಂದು ದಿನದ ಕಲೆಕ್ಷನ್ 100 ಕೋಟಿ..ಯಾರದ್ದು ಅದೃಷ್ಟ ಅಂತಾ ಮಾಸ್ ಮಹಾರಾಜನನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ,
ಟೈಗರ್ ನಾಗೇಶ್ವರ್ ರಾವ್ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮಾಡಿರುವ ರವಿತೇಜ ಆ ಚಿತ್ರದ ಪ್ರಮೋಷನ್ ನಲ್ಲಿ ಯಶ್ ಬಗ್ಗೆ ಕೇಳಿದಾಗ, ಕೆಜಿಎಫ್ ಸಿನಿಮಾ ಸಿಗುವುದಕ್ಕೆ ಯಶ್ ಬಹಳ ಲಕ್ಕಿ ಎಂದಿದ್ದಾರೆ. ರವಿತೇಜ ಈ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಿನ್ನ ಸಿನಿಮಾ ಪ್ರಚಾರಕ್ಕೆ ಯಶ್ ಬಗ್ಗೆ ಹೀಗೆಲ್ಲಾ ಊಡಾಫೆ ಮಾಡೋದಾ? ಸರಿಯಲ್ಲ ಕ್ಷಮೆ ಕೇಳಬೇಕು ಎಂತಾ ಅಣ್ತಮ್ಮಾನ ಅಭಿಮಾನಿದೇವರುಗಳು ಆಗ್ರಹಿಸ್ತಿದ್ದಾರೆ. Yes..He is lucky..ಅಂತಹ ವಿಷನರಿ ಹೀರೋ ಪಡೆದಿರುವ ನಾನು ಅದೃಷ್ಟವಂತರೇ..ಅಂತಹ ಡಿಡಿಕೇಟೇಡ್ ಫ್ಯಾಷನೇಟೇಡ್ ಹೀರೋ ಪಡೆದಿರುವ ಕನ್ನಡ ಚಿತ್ರರಂಗ ಲಕ್ಕಿ ಅಂತಾ ರವಿತೇಜ ಹೇಳಿಕೆಗೆ ಟಕ್ಕರ್ ಕೊಡ್ತಿದ್ದಾರೆ.