2023ರ ನಡೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಯತ್ನಾಳ್ ಕಾರಣ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವು ಹಾಲಿ ಶಾಸಕರನ್ನ ಕರೆದಿಲ್ಲ. ಮಾಜಿ ಶಾಸಕರನ್ನ ಮಾತ್ರ ಕರೆದಿದ್ದೇವೆ. ಸ್ವಯಂ ಘೋಷಣೆಯ ನಾಯಕ ಅವರು.
ಹೈಕಮಾಂಡ್ ನಾಯಕರ ವಿರುದ್ಧ ಮಾತಾಡ್ತಾರೆ. ನಿಮ್ಮದು ಹರಕು ಬಾಯಿ. ನೀವೇನು ಮೊಹಮದ್ ಬಿನ್ ತೊಘಲಕಾ? 2023 ರಲ್ಲಿ ಬಿಜೆಪಿ ಸೋಲಿಗೆ ಯತ್ನಾಳ್ ಕಾರಣ. ಕಾಂಗ್ರೆಸ್ ಏಜೆಂಟ್ ತರಹ ಮಾತಾಡಿ ಬಿಜೆಪಿ ಸೋಲಿಗೆ ಕಾರಣ ಆಯ್ತು. ಹರಕು ಬಾಯಿ ಮಾತಾಡಿ ಪಕ್ಷಕ್ಕೆ ಸೋಲಾಯ್ತು ಎಂದು ಕಿಡಿಕಾರಿದರು.
ವಕ್ಫ್ ಹೋರಾಟಕ್ಕೆ ಶೋಭಾ ಕರಂದ್ಲಾಜೆ, ಜೋಷಿ ಬಂದಿದ್ದರು. ಹಾಗಂತ ಪರ್ಯಾಯ ನಾಯಕತ್ವ ಸೃಷ್ಟಿ ಮಾಡಿ ಅಂತಾ ಹೇಳಿದ್ದಾರಾ? ನಿಮಗೆ ಪ್ರವಾಸ ಮಾಡಲು ಪಕ್ಷದ ಚಿಹ್ನೆ ಕೊಡಲಾಗಿದೆಯಾ? ವಿನಾಕಾರಣ ಸಂಘರ್ಷ ಮಾಡ್ತಿದ್ದಾರೆ. ಕಾಂಗ್ರೆಸ್ನಲ್ಲಿ ದೊಡ್ಡ ಒಡಕು ಇದೆ.
ಸಿದ್ದರಾಮಯ್ಯ, ಡಿಕೆಶಿ ನಡುವೆ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಹೊರಗೆ ತೋರಿಸುತ್ತಿಲ್ಲ. ನೀವು ಯಾಕೆ ಹೀಗೆ ಮಾತಾಡ್ತಿದ್ದೀರಾ? ನಿಮ್ಮ ನಡವಳಿಕೆ ಬದಲಾವಣೆ ಆಗಬೇಕು. ರಾಷ್ಟ್ರೀಯ ಅಧ್ಯಕ್ಷರ ಭೇಟಿ ಮಾಡ್ತೀವಿ. ದಾವಣಗೆರೆಯಲ್ಲಿ ಸಮಾವೇಶ ಮಾಡ್ತೀವಿ. ಯತ್ನಾಳ್ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು.