ವಿಜಯಪುರ:- ಸೂರಜ್ ರೇವಣ್ಣ ಪ್ರಕರಣದ ಬಗ್ಗೆ ನಾನು ಮಾತನಾಡಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸೂರಜ್ ರೇವಣ್ಣ ಪ್ರಕರಣದ ಬಗ್ಗೆ ತಾನೇನೂ ಹೇಳಲ್ಲ, ತನಿಖೆ ನಡೆಯುತ್ತದೆ, ಸತ್ಯ ಹೊರಬರುತ್ತದೆ ಎಂದಷ್ಟೇ ಅವರು ಹೇಳಿದರು.
ಇನ್ನೂ ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭ್ರಷ್ಟಾಚಾರ-ರಹಿತ ಆಡಳಿತ ನಡೆಸಿದೆ, ವಿರೋಧ ಪಕ್ಷಗಳು ಭ್ರಷ್ಟಾಚಾರ ಹುಡುಕುವ ಭಗೀರಥ ಪ್ರಯತ್ನಗಳನ್ನು ನಡೆಸಿವೆ, ಆದರೆ ಅವುಗಳಿಗೆ ಸಾಧ್ಯವಾಗಿಲ್ಲ ಎಂದು ಹೇಳಿದರು. ಕಳೆದೊಂದು ದಶಕದ ಅವಧಿಯಲ್ಲಿ ದೇಶದೆಲ್ಲೆಡೆ ರಸ್ತೆ ಕಾಮಗಾರಿ ನಡೆದಿದೆ, ಅನೇಕ ಕಡೆ ಹೆದ್ದಾರಿಗಳ ನಿರ್ಮಾಣವಾಗಿದೆ, ಸಿಎನ್ ಜಿಯನ್ನು ಹೆಚ್ಚಿನ ಮಟ್ಟಿಗೆ ಬಳಸಲಾಗುತ್ತಿದೆ ಮತ್ತು ಮುಬರುವ ದಿನಗಳಲ್ಲಿ ಪ್ರತಿ ಮನೆಗೆ ಸೋಲಾರ್ ಪವರ್ ಒದಗಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಯತ್ನಾಳ್ ಹೇಳಿದರು.
ತೈಲಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಗಳ ಮೇಲೆ ನಿರ್ಭರಗೊಂಡಿರುತ್ತದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ಬ್ಯಾರೆಲ್ ತೈಲದ ಬೆಲೆ ಕಡಿಮೆ ಆದಾಗ ಭಾರತದಲ್ಲೂ ಕಡಿಮೆಯಾಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವೇನೂ ಇರದು ಎಂದು ಯತ್ನಾಳ್ ಹೇಳಿದರು