ಬೆಂಗಳೂರು: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಬೆಂಗಳೂರಿನ ಕಾವೇರಿ ನಿವಾಸವನ್ನು ಖಾಲಿ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿ ಮುಕ್ತಾಯ ಆಗ್ತಿದ್ದಂತೆ ಬಿಎಸ್ವೈ ಮನೆ ಖಾಲಿ ಮಾಡಿದ್ದಾರೆ. ಡಾಲರ್ಸ್ ಕಾಲೋನಿಯ ತಮ್ಮ ದವಳಗಿರಿಯ ನಿವಾಸಕ್ಕೆ ಇಂದು ಬಿಎಸ್ ವೈ ಶಿಫ್ಟ್ ಆಗಿದ್ದಾರೆ. ಈ ಹಿಂದೆ ಸಿಎಂ ಆಗಿದ್ದಾಗಲಿಂದಲೂ ಕಾವೇರಿ ನಿವಾಸದಲ್ಲಿ ಬಿಎಸ್ ಯಡಿಯೂರಪ್ಪ ವಾಸವಿದ್ದರು.
ಆ ನಂತರ ಸಿಎಂ ಸ್ಥಾನದಿಂದ ಕೆಳಗೆ ಇಳಿದ ಬಳಿಕವೂ ಕಾವೇರಿಯಲ್ಲಿಯೇ ವಾಸವಿದ್ದರು. ಇವಾಗ ತಮ್ಮ ಪಕ್ಷ ಅಧಿಕಾರಕ್ಕೆ ಬಾರದೆ ಇರೋದ್ರಿಂದ ತಮ್ಮ ಖಾಸಗಿ ನಿವಾಸಕ್ಕೆ ಬಿ ಎಸ್ ಯಡಿಯೂರಪ್ಪ ಅವರು, ಶಿಫ್ಟ್ ಆಗಿದ್ದಾರೆ.
ಈ ಮೂಲಕ ಹೊಸ ಸಿಎಂ ಗೆ ಕಾವೇರಿ ನಿವಾಸ ಬಿಟ್ಟು ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ತರ ಹೆಚ್ಚು ಸಮಯ ತಗೊಳ್ಳದೇ ಯಡಿಯೂರಪ್ಪ ಅವರು, ಬೇಗನೇ ಮನೆ ಖಾಲಿ ಮಾಡಿದ್ದಾರೆ. ಇನ್ನೂ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆ ಆಗಿದ್ದಾಗ ಸ್ವಲ್ಪ ದಿನ ಸಿದ್ದರಾಮಯ್ಯ ಅವರು ಕಾವೇರಿಯಲ್ಲೇ ಇದ್ದಿದ್ದರು.