ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ(Karnataka Assembly Elections 2023) ನಡೆಯುತ್ತಿದೆ. ಇದರ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಕೋವಿಡ್, ಡೆಂಘಿ ಭೀತಿ ಜೊತೆಗೆ ಇದೀಗಾ ಹಳದಿ ಜ್ವರದ ಆತಂಕ ಉದ್ಭವಿಸಿದೆ(Yellow Fever). ಸುಡಾನ್ ನಿಂದ ಬಂದವರು ಹಳದಿ ಜ್ವರದ ಆತಂಕ ಹೊತ್ತು ತಂದಿದ್ದು, 45 ಶಂಕಿತರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ರಾಜಧಾನಿಗೆ ಹಳದಿ ಜ್ವರದ ಭೀತಿ?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ಹಳದಿ ಜ್ವರದ ಭೀತಿ ಎದುರಾಗಿದೆ. ಆಪರೇಷನ್ ಕಾವೇರಿ ಕಾರ್ಯಚರಣೆಯಡಿ ಐಟಿ ಸಿಟಿಗೆ ಬಂದಿಳಿದ ಸುಡಾನ್ ಮೂಲದ 45 ಮಂದಿ ಶಂಕಿತರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್ ಮಾಡಿದೆ. ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕಾ, ಉಗಾಂಡ, ನೈಜೀರಿಯಾ, ಕೀನ್ಯಾ ಸೇರಿದಂತೆ ಕೆಲ ದೇಶಗಳಲ್ಲಿ ಯಲ್ಲೋ ಫೀವರ್ ವೈರಸ್ ಆರ್ಭಟಿಸಿದೆ. ಹಳದಿ ಜ್ವರ ಕಾಣಿಸಿಕೊಂಡಿರುವ ಹೈ ರಿಸ್ಕ್ ದೇಶಗಳಿಂದ ಬರುವವರಿಗೆ ಎಲ್ಲೋ ಫೀವರ್ ವ್ಯಾಕ್ಸಿನ್ ಕಡ್ಡಾಯ ಮಾಡಲಾಗಿದೆ. ಆದರೆ ಆಪರೇಷನ್ ಕಾವೇರಿ ಕಾರ್ಯಚರಣೆಯಡಿ ಸುಡಾನ್ನಿಂದ 362 ಮಂದಿ ಆಗಮಿಸಿದ್ದಾರೆ. ಈ ಪೈಕಿ 45 ಜನರ ಹತ್ರ ಲಸಿಕೆ ಸರ್ಟಿಫಿಕೇಟ್ ಇಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ 45 ಶಂಕಿತರನ್ನು ಕ್ವಾರಂಟೈನ್ ಮಾಡಿದೆ.
ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕ್ವಾರಂಟೈನ್
ಕಣ್ಣು ಉರಿ, ಹಳದಿ ಕಣ್ಣು, ಜ್ವರ, ಶೀತ, ಸುಸ್ತು, ಮೈ ಕೈ ನೋವು ಇವುಗಳು ಹಳದಿ ಜ್ವರದ ಗುಣ ಲಕ್ಷಣಗಳಾಗಿದೆ. ಸದ್ಯಕ್ಕೆ ದೇಶದಲ್ಲಿ ಯಾವುದೇ ಹಳದಿ ಜ್ವರದ ಪ್ರಕರಣ ಪತ್ತೆಯಾಗಿಲ್ಲ. ಆದರೆ ಆತಂಕ ಇರುವ ಹಿನ್ನಲೆ, ಮುಂಜಾಗ್ರತಾ ಕ್ರಮವಾಗಿ ಹೈ ರಿಸ್ಕ್ ದೇಶಗಳ ಪ್ರಯಾಣಿಕರಿಗೆ ಹಳದಿ ಜ್ವರದ ಲಸಿಕೆ ಕಡ್ಡಾಯ ಮಾಡಲಾಗಿದೆ. ನಿನ್ನೆ ಸುಡಾನ್ ನಿಂದ ಬಂದಿರುವ 45 ಪ್ರಯಾಣಿಕರು ಲಸಿಕೆ ಸರ್ಟಿಫಿಕೇಟ್ ಪ್ರಡ್ಯೂಸ್ ಮಾಡಿಲ್ಲ.
ಹೀಗಾಗಿ ಅವರನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಕ್ವಾರಂಟೈನ್ ಮಾಡಲಾಗಿದೆ. ಸಾಮಾನ್ಯವಾಗಿ 6 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯ. ಆದರೆ ಇವರು ಈಗಾಗಲೇ ಸುಡಾನ್ ಪ್ರಯಾಣದಲ್ಲಿ ಎರಡು ದಿನ ಕಳೆದಿದ್ದಾರೆ. ಹೀಗಾಗಿ 4 ದಿನಗಳ ಕ್ವಾರಂಟೈನ್ ಮಾಡಲಾಗಿದೆ. ಹಂದಿ ಜ್ವರ ಬಂದವರಲ್ಲಿ ಶೇಕಾಡ 15% ರಷ್ಟು ಸೋಂಕಿತರಿಗೆ ರಕ್ತಸ್ರಾವ, ಆಘಾತ, ಅಂಗಾಂಗ ವೈಫಲ್ಯ ಎದುರಾಗುವ ಭೀತಿ ಇದೆ. ಕೆಲವೊಮ್ಮೆ ಸಾವಿನ ದಾರಿ ಕೂಡ ತೋರಿಸಬಹುದು. ಹೀಗಾಗಿ ರಾಜಧಾನಿಯಲ್ಲಿ ಹಳದಿ ಜ್ವರದ ಕುರಿತು ಕಟ್ಟೆಚ್ಚರ ವಹಿಸಲಾಗಿದೆ.