ಯಾವ ಋತುವೇ ಆಗಿರಲಿ ಮೊಸರು ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡಾ ಒಂದು ಕಪ್ ಮೊಸರು ತಿಂದರೆ ಒಳ್ಳೆಯದು. ಮೊಸರು ಹೊಟ್ಟೆ ಮತ್ತು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.ಇದೆಲ್ಲದರ ಜೊತೆಗೆ ಮೊಸರು ತೂಕವನ್ನು ಕಡಿಮೆ ಮಾಡಲು ಕೂಡಾ ಬಹಳಷ್ಟು ಸಹಕಾರಿ.
ಏನೇ ಮಾಡಿದರೂ ಕರಗದ ಹಠಮಾರಿ ಬೊಜ್ಜನ್ನು ಕರಗಿಸುವ ಶಕ್ತಿ ಮೊಸರಿಗಿದೆ
ಮೊಸರು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆಯ ಹೆಚ್ಚಳ ಎಂದರೆ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯ ಪ್ರಮುಖ ಹಂತ. ಮೊಸರಿನಲ್ಲಿರುವ ಪ್ರೋಬಯಾಟಿಕ್ಗಳು ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಇದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.ಚಯಾಪಚಯ ಕ್ರಿಯೆ ಸರಿಯಾಗಿದ್ದರೆ ದೇಹ ಸಾಕಷ್ಟು ಪೋಷಕಾಂಶಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.
ಹೆಚ್ಚು ಸಮಯದವರಿಗೆ ಹಸಿವನ್ನು ತಡೆಯುತ್ತದೆ :
ತೂಕ ಇಳಿಸಿಕೊಳ್ಳಲು ನಿರ್ಧರಿಸಿದ ತಕ್ಷಣ ಜನರು ಸಾಮಾನ್ಯವಾಗಿ ಹೆಚ್ಚು ಸೇವಿಸಲು ಪ್ರಾರಂಭಿಸುವ ಆಹಾರವೆಂದರೆ ಪ್ರೋಟೀನ್.ಆದರೆ ಕಾರ್ಬೋಹೈಡ್ರೇಟ್ ಅನ್ನು ಕಡಿಮೆ ಮಾಡುತ್ತಾರೆ.ಮೊಸರಿನಲ್ಲಿ ಕಡಿಮೆ ಕಾರ್ಬ್ ಮತ್ತು ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ. ಹಾಗಾಗಿ ಇದು ತೂಕ ನಷ್ಟ ಮಾಡಲು ಬಯಸುವವರಿಗೆ ಪರಿಪೂರ್ಣ ಆಹಾರವಾಗಿದೆ.
ಈ ರೀತಿಯಾಗಿ ಮೊಸರನ್ನು ಆಹಾರದಲ್ಲಿ ಸೇರಿಸಿ :
1.ಬೆಳಗಿನ ಉಪಾಹಾರದಲ್ಲಿ ಸ್ಮೂಥಿಯಾಗಿ ತೆಗೆದುಕೊಳ್ಳಿ.
2.ಮೊಸರು ಬಜ್ಜಿ ರೂಪದಲ್ಲಿ ಸೇವಿಸಬಹುದು
3.ಮೊಸರು ತೊಇನ್ನುವಾಗ ಸಕ್ಕರೆ ಸೇರಿಸಬೇಡಿ, ಬದಲಿಗೆ ಸರಳ ಮೊಸರು ಅಥವಾ ಜೀರಿಗೆ ಮೆಂತ್ಯೆ ಪುಡಿ ಸೇರಿಸಿದ ಮಸಾಲೆಯುಕ್ತ ಮೊಸರನ್ನು ತಿನ್ನಿರಿ.
4. ಮೊಸರಿಗೆ ಡ್ರೈ ಫ್ರುಟ್ಸ್ ಗಳನ್ನು ಸೇವಿಸಿ ತಿನ್ನಬಹುದು