ಈಗೀನ ಕಾಲದಲ್ಲಿ ಯಾರಿಗೇಳಿ ತಂಪು ಪಾನಿಯ(Cool Drink) ಇಷ್ಟ ಇಲ್ಲ ಹೇಳಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟ. ಆದರೆ ಇದರ ಬಗ್ಗೆ ತಿಳಿದುಕೊಳ್ಳಬೇಕಾದ ಸತ್ಯವೊಂದಿದೆ.
ಚೂಯಿಂಗ್ ಗಮ್ ಸೇರಿದಂತೆ ತಂಪುಪಾನಿಯಗಳಲ್ಲಿ ಸೇರಿಸಲಾಗುವ ಕೃತಕ ಸಿಹಿಕಾರಕ ಆಸ್ಪರ್ಟೆಮ್ (Aspartame) ಮಾರಕ ಕಾಯಿಲೆಯಾದ ಕ್ಯಾನ್ಸರ್ ಬರುತ್ತದೆ ಎಂದು ಅಮೆರಿಕದ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಎಚ್ಚರಿಸಿದೆ.
ಆಸ್ಪರ್ಟೆಮ್ ಬಳಸದಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಈ ಹಿಂದೆ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೆ ಇಂತಹದೊಂದು ಸಂಶೋಧನೆ ತಂಪು ಪಾನಿಯಗಳಲ್ಲಿರುವ ಕೃತಕ ಸಿಹಿಕಾರಕಗಳು ಕ್ಯಾನ್ಸರ್ಗೆ ಕಾರಣವಾಗುತ್ತವೆ ಎಂದು ಹೇಳಿದೆ. 1981 ರಿಂದ ಆಸ್ಪರ್ಟೆಮ್ ಬಳಕೆ ಮಾಡಲಾಗುತ್ತಿದೆ. ಇದನ್ನು 5 ಬಾರಿ ಪರೀಕ್ಷೆ ಮಾಡಿ ಅನುಮೋದನೆ ನೀಡಲಾಗಿತ್ತು. ಹೀಗಾಗಿ ಇದನ್ನು ಭಾರತ ಸೇರಿ 90ಕ್ಕೂ ಹೆಚ್ಚು ದೇಶಗಳಲ್ಲಿ ಈಗಲೂ ಚಾಲನೆಯಲ್ಲಿದೆ.
ಅಮೆರಿಕದ ಕೋಕಾ-ಕೋಲಾ ಮತ್ತು ಪೆಪ್ಸಿಕೋದಂತ ಕಂಪನಿಗಳು ಸಂಶೋಧನಾ ಸಂಸ್ಥೆಯ ಮಾಹಿತಿಯನ್ನು ನಿರಾಕರಣೆ ಮಾಡಿ ವಿರೋಧ ವ್ಯಕ್ತಪಡಿಸಿವೆ. ಆಸ್ಪರ್ಟೆಮ್ ಸುರಕ್ಷಿತವಾಗಿದೆ ಎಂದು ವೈಜ್ಞಾನಿಕ ಪರಿಶೀಲನೆ ಮಾಡಿದ ಬಳಿಕವೇ ಅದನ್ನು ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ಎಲ್ಲ ಕಂಪನಿಗಳಲ್ಲಿ ಒಮ್ಮತವಿದೆ..