ಕನ್ನಡದ ಹುಡುಗಿ, ಬಾಲಿವುಡ್ ಬೆಡಗಿ ಅಮ್ಮನಾಗುವ ಸಂಭ್ರಮದಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಈ ಮಧ್ಯೆ ಅಂಬಾನಿ ಮನೆ ಮಗನ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ತುಂಬು ಗರ್ಭಿಣಿಯಾಗಿರುವ ದೀಪಿಕಾ ಕಾರ್ಯಕ್ರಮದಲ್ಲಿ ದುಬಾರಿ ಸೀರೆಯುಟ್ಟು ನೋಡುಗರನ್ನು ಮನ ಸೂರೆಗೊಳಿಸಿದ್ದಾರೆ.
ದೀಪಿಕಾ ಪಡುಕೋಣೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮದಲ್ಲಿ ಪರ್ಪಲ್ ಕಲರ್ ಸೀರೆ ಧರಿಸಿ ಮಿರಮಿರ ಮಿಂಚಿದ್ದಾರೆ. ಇದೇ ಸೀರೆಯಲ್ಲಿ ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಅಂದ ಹಾಗೆ ದೀಪಿಕಾ ಧರಿಸಿದ್ದ ಈ ಸೀರೆಯ ಬೆಲೆ 1 ಲಕ್ಷದ 92 ಸಾವಿರ ರೂ. ಮೌಲ್ಯದಾಗಿದ್ದು, ಈ ಸೀರೆಯ ರೇಟ್ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ.
ದೀಪಿಕಾ ಧರಿಸಿದ್ದ ಈ ದುಬಾರಿ ಸೀರೆಯನ್ನು ತಯಾರಿಸಲು 3,400 ಗಂಟೆಗಳು ತೆಗೆದುಕೊಳ್ಳಲಾಗದೆ. ಕೈಗಳಿಂದಲೇ ಹೆಚ್ಚಾಗಿ ಕಸೂತಿ ಮಾಡಿ ಸೀರೆಯನ್ನು ಹೆಣೆಯಾಗಿದ್ದು ಈ ಸೀರೆಯಲ್ಲಿ ನಟಿ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ಇದರಲ್ಲಿ 16ನೇ ಶತಮಾನದ ವಾಸ್ತುಶಿಲ್ಪಗಳನ್ನು ಬಿಡಿಸಲಾಗಿದೆಯಂತೆ. ಜಾಕೆಟ್ ಅನ್ನು ರಜಪೂತರ ಕಾಲದ ಚನಿಯಾ ಚೋಲಿ ಸಂಸ್ಕೃತಿಯನ್ನ ಹೋಲುವಂತೆ ತಯಾರು ಮಾಡಲಾಗಿದೆ.
ಈ ಬಗ್ಗೆ ದೀಪಿಕಾ ಪಡುಕೋಣೆಯವರು ತಮ್ಮ ಇನ್ಸ್ಟಾ ಪೇಜ್ನಲ್ಲಿ ಶೇರ್ ಮಾಡಿದ್ದು ತನ್ನ ಪತಿ ರಣವೀರ್ ಸಿಂಗ್ಗೂ ಟ್ಯಾಗ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ರಣವೀರ್ ಸಿಂಗ್, ಇದು ನನ್ನ ಸುಂದರವಾದ ಹುಟ್ಟುಹಬ್ಬದ ಉಡುಗೊರೆ, ಐ ಲವ್ ಯು ಎಂದು ಹೇಳಿದ್ದಾರೆ.