ಬೆಂಗಳೂರು:- ತನ್ನ ಪ್ರೀತಿಗೆ ಪೋಷಕರು ಒಪ್ಪದ ಹಿನ್ನೆಲೆ ಮನನೊಂದು ಯುವತಿ ಸೂಸೈಡ್ ಗೆ ಯತ್ನಿಸಿದ್ದ ಘಟನೆ ನಗರದ ದಾಸರಹಳ್ಳಿಯಲ್ಲಿ ಜರುಗಿದೆ.
ಮಲ್ಲನಗೌಡ ಮತ್ತು ಜ್ಯೋತಿ ದಂಪತಿಗಳ ಪುತ್ರಿ ಶ್ರಾವಣಿ ಇದೇ ಯುವತಿ ಮೃತಳಾಗಿರುವುದು.
ಮದುವೆ ವಿಚಾರವಾಗಿ ಮಗಳಿಗೆ ಮನವೊಲಿಸಲು ದಾವಣಗೆರೆಯಿಂದ ದಾಸರಹಳ್ಳಿಯ ಮಗಳ ಮನೆಗೆ ತಾಯಿ ಜ್ಯೋತಿ ಬಂದಿದ್ರು. ಮದುವೆಗೆ ನಿರಾಕರಿಸಿದ ಶ್ರಾವಣಿ ನಿನ್ನೆ ಬೆಳಿಗ್ಗೆ 10:30ಗೆ ಗೋಲ್ಡ್ ಜಿಮ್ಗೆ ಕೆಲಸಕ್ಕೆ ತೆರಳಿದ್ದಳು.
ಮದುವೆಯ ಒತ್ತಾಯಕ್ಕೆ ನೊಂದ ಶ್ರಾವಣಿ, ಮಧ್ಯಾಹ್ನ 2ಗಂಟೆ ವೇಳೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಲವ್ವರ್ ಶಂಕರ್ಗೆ ಕರೆ ಮಾಡಿ ಜಿಮ್ಗೆ ಕರೆಸ್ಕೊಂಡು ವಿಷ ಕುಡಿದ ವಿಷಯ ತಿಳಿಸುತ್ತಿದ್ದಂತೆ ಖಾಸಗಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದ್ರೆ ಅತಿಯಾದ ವಾಂತಿಯಿಂದ ಚಿಕಿತ್ಸೆ ಫಲಿಸದೆ ಶ್ರಾವಣಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಇನ್ನು ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆಡೆಸಿದ ಪೊಲೀಸರು ಮೃತದೇಹವನ್ನ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.