ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ಪವಿತ್ರಾ ಗೌಡ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್,ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿಯನ್ನು ಬಂಧಿಸಲಾಗಿದೆ. ಸದ್ಯ ಪರಪ್ಪನ ಅಗ್ರಹಾರದಲ್ಲಿರೋ ಪವಿತ್ರಾ ಗೌಡರನ್ನು ಕಾಣಲು ಮಗಳು ಖುಷಿ ಆಗಾಗ ಜೈಲಿಗೆ ಭೇಟಿ ನೀಡುತ್ತಾ ಇರುತ್ತಾರೆ. ಈ ಮಧ್ಯೆ ಪ್ರೀತಿಯ ಅಮ್ಮನನ್ನು ನೆನೆದು ಖುಷಿ ಗೌಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ.
ಅಮ್ಮನ ಜೊತೆಗಿರುವ ಫೋಟೋ ಹಂಚಿಕೊಂಡ ಖುಷಿಗೊಂಡ ಅಮ್ಮನನ್ನು ಹೊಗಳಿದ್ದಾರೆ. ಅವಳು ನನ್ನ ಪ್ರೇರಣೆ, ಪರಿಸ್ಥಿತಿ ಎಷ್ಟೇ ಇದ್ದರೂ ಹೇಗೆ ಗಟ್ಟಿಯಾಗಿರಬೇಕೆಂದು ಕಲಿಸುತ್ತಾಳೆ. ಅವಳು ಯಾವಾಗಲೂ ತುಂಬಾ ಮುಕ್ತ ಮತ್ತು ಬೆಂಬಲ ನೀಡುತ್ತಾಳೆ. ಅವಳು ಶತಕೋಟಿಯಲ್ಲಿ ಒಬ್ಬಳು. ಅವಳಂತಹ ತಾಯಿಯನ್ನು ಪಡೆಯಲು ನಾನು ನಿಜವಾಗಿಯೂ ತುಂಬಾ ಕೃತಜ್ಞನಾಗಿದ್ದೇನೆ ಮತ್ತು ಅದೃಷ್ಟಶಾಲಿಯಾಗಿದ್ದೇನೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಅಮ್ಮ ಅಂತ ಖುಷಿ ಗೌಡ ಬರೆದುಕೊಂಡಿದ್ದಾರೆ.
ಸ್ಯಾಂಡಲ್ವುಡ್ ನಟಿ ಹಾಗೂ ಫ್ಯಾಷನ್ ಡಿಸೈನರ್ ಪವಿತ್ರಾ ಗೌಡ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೈಲಿಗೆ ಹೋಗುವ ಮುನ್ನ ನಟಿ ಪವಿತ್ರಾ ಗೌಡ ಸೆಲೆಬ್ರಿಟಿಗಳಿಗೆ ಭಿನ್ನ ವಿಭಿನ್ನವಾಗಿ ಉಡುಪು ವಿನ್ಯಾಸ ಮಾಡುತ್ತಿದ್ದರು. ಆದರೆ ಕೊಲೆ ಕೇಸ್ನಲ್ಲಿ ಜೈಲು ಸೇರಿದ ಬಳಿಕ ಆ ಬ್ಯುಸಿನೆಸ್ ಅರ್ಧಕ್ಕೆ ನಿಂತಿಲ್ಲ. ಬದಲಿಗೆ ಅಮ್ಮನ ಫ್ಯಾಷನ್ ಬೋಟಿಕ್ ಬ್ಯೂಸಿನೆಸ್ ಅನ್ನು ಮಗಳು ಖುಷಿ ನೋಡಿಕೊಳ್ಳುತ್ತಿದ್ದಾರೆ. ಪವಿತ್ರಾ ಗೌಡ ಮಗಳು ಖುಷಿ ಗೌಡಗೆ ಈಗ ದೊಡ್ಡ ಜವಾಬ್ದಾರಿ ಇದೆ. ತಾಯಿ ನಡೆಸುತ್ತಿದ್ದ ಫ್ಯಾಷನ್ ಬೋಟಿಕ್ ಅನ್ನು ಮಗಳು ಖುಷಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ರಾಜರಾಜೇಶ್ವರಿ ನಗರದ ನಿವಾಸದ ಬಳಿ ಇರುವ ರೆಡ್ ಕಾರ್ಪೆಟ್ 777 ಶಾಪ್ ಅನ್ನು ಖುಷಿ ಗೌಡ ನೋಡಿಕೊಳ್ಳುತ್ತಿದ್ದು ಅಜ್ಜಿಯ ಆಶ್ರಯದಲ್ಲಿ ಖುಷಿ ಗೌಡ ಇದ್ದಾರೆ.