ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಬಿಜೆಪಿ ಅಕ್ಕಿ ನೀಡದ ಹಿನ್ನೆಲೆ ಯೂತ್ ಕಾಂಗ್ರೆಸ್ ನ ನೂರಾರು ಕಾರ್ಯಕರ್ತರು ಮಲ್ಲೇಶ್ವರಂನ ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ನೂರಾರು ಕೈ ಕಾರ್ಯಕರ್ತರು ಸಂಸದರ ಮುಕವಾಡ ಧರಿಸಿ, ಅಕ್ಕಿ ಮೂಟೆ ಹೊತ್ತು ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಲು ಮುಂದಾದ್ರು ಈ ವೇಳೆ ಪೊಲೀಸರು ಬಿಜೆಪಿ ಕಛೇರಿಯ ಮುಂಭಾಗದಲ್ಲೇ ಬ್ಯಾರಿಕೇಡ್ ಹಾಕಿ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದ್ರು. ಯೂತ್ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರ ಮಧ್ಯೆ ವಾಗ್ವಾದ ನಡೆದು ಬ್ಯಾರಿಕೇಡ್ ಹತ್ತಿ ಬಿಜೆಪಿ ಕಛೇರಿ ಮುತ್ತಿಗೆ ಹಾಕಲು ನಲ್ಪಾಡ್ ಯತ್ನಿಸಿದಾಗ ಎಲ್ಲರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು. ಈ ವೇಳೆ ಮಾತನಾಡಿದ ನಲಪಾಡ್ 25 ಜನ ನಾಲಾಯಕ್ ಎಂಪಿಗಳ ವಿರುದ್ಧ ಇವತ್ತು ಪ್ರತಿಭಟನೆ ಮಾಡ್ತಿದ್ದೀವಿ.
ಕರ್ನಾಟಕದಿಂದ 25 ಸಂಸದರನ್ನು ದೆಹಲಿಗೆ ಕಳುಹಿಸಿದ್ದೇವೆ ಏನ್ ಕೆಲ್ಸ ಮಾಡ್ತಿದ್ದಾರೆ ಅವ್ರು.
ನಾವು 10 ಕೆಜಿ ಅಕ್ಕಿಯನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಅಷ್ಟೇ ಕೊಡ್ತಿಲ್ಲ ರಾಜ್ಯದ ಎಲ್ಲಾ ಕನ್ನಡಿಗರಿಗೆ ಕೊಡ್ತೀರೋದು. ಸೆಂಟ್ರಲ್ ಗೌರ್ವಮೆಂಟ್ ಏನು ಇವರ ಅಪ್ಪಂದಾ, ಸೆಂಟ್ರಲ್ ಗೌರ್ವಮೆಂಟ್ 1.2 ಬಿಲಿಯನ್ ಭಾರತೀಯರದು. ಕೇಂದ್ರದಲ್ಲಿ ಕುಳಿತವರು ತಂದೆ ಸ್ಥಾನದಲ್ಲಿ ಇದ್ದಾರೆ ಎಲ್ಲರನ್ನೂ ಚನ್ನಾಗಿ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ವಿರುದ್ದ ನಲಪಾಡ್ ಆಕ್ರೊಶ ವ್ಯಕ್ತಪಡಿಸಿದ್ರು….