ಯಸ್..! ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟೋದು..! ‘ಯುವ’ ಚಿತ್ರ ಇಂದು ರಾಜ್ಯದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಳ್ಳೊದರ ಜೊತೆಗೆ ದೊಡ್ಮನೆ ಗೌರವಕ್ಕೆ ಸಾಕ್ಷಿಯಾಗ್ತಿದೆ. ಯುವ ಯೂತ್ ಪವರ್ ಏನು ಅಂತ ಫೈನಾಲಿ ಥಿಯೆಟರ್ಗಳಲ್ಲೇ ಪ್ರೂವ್ ಆಗಿದೆ. ದೊಡ್ಮನೆ ಕುಡಿ ಯುವರಾಜ್ಕುಮಾರ್ ಮೊದಲ ಸಿನಿಮಾ ಅಂದಿನ ಪವರ್ಸ್ಟಾರ್ ಪುನೀತ್ ಅಭಿನಯದ ಅಪ್ಪು ಸಡಗರವನ್ನೂ ನೆನಪಿಸ್ತಿದೆ.
ಯುವರಾಜ್ಕುಮಾರ್, ರಾಜ್ಕುಮಾರ್ ಮೊಮ್ಮಗನಾದ್ರೂ ಧಿಡೀರ್ ಅಂತ ಸಿನಿಮಾ ಇಂಡಸ್ಟ್ರಿಯ ಮೆಟ್ಟಿಲು ಹತ್ತಿಲ್ಲ. ಒಬ್ಬ ನಟ ಹೇಗಿರಬೇಕು ಅಂತ ಯುವನಿಗೆ ಗೊತ್ತಿದೆ. ತಯಾರಿಗಳಿಲ್ಲದೇ ಅಭಿಮಾನಿಗಳ ಹೃದಯ ಕದಿಯೋದು ಸುಲಭದ ಪವರ್ ಪ್ಲೇ ಅಲ್ಲ ಅನ್ನೋದು ಯುವನಿಗೆ ಚೆನ್ನಾಗೇ ಕರಗತವಾಗಿದೆ. ಯುವ ಮಾತು ಹಾಗೂ ನಟನೆಯ ಸ್ಯಾಂಪಲ್ ನೋಡಿದ್ರೆ ಪ್ರೇಕ್ಷಕರಿಗೂ ಇದು ಗೊತ್ತಾಗ್ತಿದೆ. ಅಂದು ಪುನೀತ್ ಕೂಡ ಹೀಗೆಯೇ ಸಕಲಸಿದ್ಧತೆಗಳೊಂದಿಗೆ ಗಾಂಧಿನಗರದ ಬಾಗಿಲು ತಟ್ಟಿದ್ರು. ಇಂದು ಯುವನ ಸರದಿ. ಸಿನಿಮಾದ ಫ್ರೇಮ್ ಟು ಫ್ರೇಮ್ ಆಕ್ಟಿಂಗ್ ನೋಡಿದ್ರೆ ಯುವ ಇಲ್ಲಿ ಹೋಗೊಕೆ ಅಲ್ಲ, ಉಳಿಯೋಕೆ ಬಂದಿರೋದು ಎಂಬುದಂತೂ ಕ್ಲಿಯರ್..!
ಯುವ ಮೊದಲಹೆಜ್ಜೆಯಲ್ಲೇ ಗೆದ್ದಿದ್ದಾರೆ. ಇಲ್ಲಿ ಯಾವ ಫೇಕ್ ಆಡಂಬರವೂ ಇಲ್ಲ, ಅದ್ದೂರಿತನದ ಪರಮಾವಧಿಯೂ ಇಲ್ಲ. ಅಭಿಮಾನಿಗಳ ಪ್ರೀತಿಗೋಸ್ಕರ ಜೀವನಪೂರ್ತಿ ದುಡಿತೀನಿ ಎಂಬ ಯುವರಾಜನ ಅಭಿಮಾನದ ನಮಸ್ಕಾರವಿದೆ. ಕರ್ನಾಟಕದಾದ್ಯಂತ ರಿಲೀಸ್ ಆಗಿರೋ ಯುವ, ಭರವಸೆ ಮೂಡಿಸೋದ್ರಲ್ಲಿ ಹಿಂದೆ ಬೀಳಲ್ಲ. ಚಿತ್ರಮಂದಿರಗಳಲ್ಲಿ ಮೊಳಗಿದ ಯುವ ದಿಬ್ಬಣ, ಯುವ ಅಭಿಮಾನಿಗಳ ಮೊದಲ ಅವಿಸ್ಮರಣೀಯ ಘಳಿಗೆಯಾಗಿದೆ.
ಯುವ ಯುಗಾರಂಭ ಪಕ್ಕಾ ಪೈಸಾವಸೂಲ್ ಎನಿಸಿಕೊಳ್ತಿದೆ. ಕಾರಣ ಇಂದು ರಾಜ್ಯದ್ಯಂತ ಯುವ ಸಿನಿಮಾ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಬಹುತೇಕ ಹೌಸ್ಫುಲ್ ಸಂಭ್ರಮವನ್ನ ಬಿಗಿದಪ್ಪಿಕೊಂಡಿದೆ. ಒಬ್ಬ ಸೂಪರ್ಸ್ಟಾರ್ ಸಿನಿಮಾಗೆ ಹೇಗೆ ಮಾಸ್ ಓಪನಿಂಗ್ ಸಿಗುತ್ತೋ, ಯುವನಿಗೂ ಆರಂಭದ ಹೆಜ್ಜೆಯಲ್ಲೇ ಕರುನಾಡಿನ ಪ್ರೀತಿ ಸಿಕ್ಕಿದೆ. ಬೆಳಿಗ್ಗೆಯಿಂದಲೇ ಯುವ ಸಂಭ್ರಮ ಶುರುವಾಗಿದ್ದು ಬೆಂಗಳೂರಿನ ಅನೇಕ ಥಿಯೆಟರ್ಗಳಿಗೆ ಪ್ರೇಕ್ಷಕ ದೇವರುಗಳು ನುಗ್ಗಿಬಂದ್ರು. ಮಾರ್ನಿಂಗ್ ಶೋ ರಿಪೋರ್ಟ್ ನೋಡಿಯೇ ಬೇರೆ ಶೋಗಳ ಅಭಿಮಾನದ ಬಿಸಿ ಕೂಡ ಡಬಲ್ ಆಯ್ತು.
‘ಯುವ’ ಸಿನಿಮಾ ಒಂದು ಕಂಪ್ಲೀಟ್ ಮನರಂಜನೆಯ ತೃಪ್ತಿಯ ಪ್ಯಾಕೇಜ್. ಇಲ್ಲಿ ಯುವರಾಜ್ ಕುಮಾರ್ ಆಂಗ್ರಿಯಂಗ್ ಮ್ಯಾನ್ ಆಗಿ ಮಿಂಚ್ತಾರೆ. ಕಾಲೇಜು ಹುಡುಗನಾಗಿ, ಡೆಲಿವರಿ ಬಾಯ್ ಆಗಿ ಪ್ರೇಕ್ಷಕರಿಗೆ ಹತ್ರವಾಗ್ತಾರೆ. ಯುವನ ನಟನೆ ತೆರೆಮೇಲೆ ನೋಡಿ ಏಂಜಾಯ್ ಮಾಡಬೇಕು. ಖಡಕ್ ಡೈಲಾಗ್ ಗಳು ಹಾಗೂ ವೈಬ್ರೇಷನ್ ಸೃಷ್ಟಿಸೋ ಮ್ಯಾನರಿಸಂ ಯುವನ ಮೈನ್ ಪ್ಲಸ್ ಪಾಯಿಂಟ್. ಸಪ್ತಮಿಗೌಡ ಯುವನ ಸಿರಿಯಾಗಿ ಕೊಟ್ಟ ಸ್ಪೇಸ್ ನಲ್ಲೇ ಆಟವಾಡಿದ್ದಾರೆ. ಸಂತೋಷ್ ಆನಂದ್ರಾಮ್ ಇಲ್ಲೂ ತಮ್ಮ ಫ್ಯಾಮಿಲಿ ಆಡಿಯನ್ಸ್ ಕ್ರಾಫ್ಟ್ ಬಿಟ್ಟುಕೊಟ್ಟಿಲ್ಲ. ನಮ್ಮನ್ನ ನಾವು ಮರೆಯೋ ಈ ಕಾಲದಲ್ಲಿ, ಯುವ ಕೌಟುಂಬಿಕ ಸಮಸ್ಯೆಗಳು ಹಾಗೂ ಸಂಬಂಧಗಳ ಮೇಲೆ ಬೆಳಕು ಚೆಲ್ತಾನೆ. ಮಧ್ಯಮವರ್ಗದ ಹುಡುಗರು ರೊಚ್ಚಿಗೆದ್ರೆ ಏನು ಮಾಡಬಲ್ಲರು ಎಂಬ ಎಳೆಯೂ ಸಿನಿಮಾದಲ್ಲಿದೆ. ಅಚ್ಯುತ್ ಕುಮಾರ್, ಸುಧಾರಾಣಿ, ಗೋಪಾಲಕೃಷ್ಣದೇಶಪಾಂಡೆ, ಪ್ರಶಾಂತ್ ನಟನಾ, ಖಳನಟ ರಣವ್ ಕ್ಷೀರ್ ಸಾಗರ ಪೋಷಕಪಾತ್ರಗಳಾಗಿ ಯುವನಿಗೆ ಶಕ್ತಿ ತುಂಬ್ತಾರೆ. ಅಪ್ಪ-ಮಗ ಜಗಳವಾಡಿದ್ರೂ ಮನಸ್ಸಿನೊಳಗೆ ಇರೋ ಪ್ರೀತಿಯನ್ನ ಯುವ ಸಿನಿಮಾದೂದ್ದಕ್ಕೂ ಬಿಚ್ಚಿಡುತ್ತಾನೆ. ಕ್ಲೈಮ್ಯಾಕ್ಸ್ ಗುಟ್ಟನ್ನ ಚಿತ್ರಮಂದಿರದಲ್ಲೇ ನೋಡಿದ್ರೆ ಚೆಂದ..!
‘ಯುವ’ನ ಎಂಟ್ರಿಗೆ ಪ್ರೇಕ್ಷಕರು ನೇರವಾಗಿ ಫಿದಾ ಆಗಿದ್ದಾರೆ. ಅಪ್ಪುರನ್ನ ಇನ್ಮುಂದೆ ಯುವನಲ್ಲೇ ನೋಡ್ತೀವಿ ಅಂತ ಭಾವುಕರಾಗಿದ್ದಾರೆ. ಯುವ ಸಿನಿಮಾ ಎಲ್ಲೂ ಬೋರ್ ಹೊಡೆಸಲ್ಲ, ಕೊಟ್ಟ ದುಡ್ಡಿಗೂ ಮೋಸ ಮಾಡಲ್ಲ ಎನ್ನುತ್ತಲೇ ಅಭಿಮಾನದ ಹಬ್ಬ ಮಾಡಿದ್ದಾರೆ. ಇನ್ನೂ ಯುವ ನನ್ನ ಮಗನಲ್ಲ, ಪುನೀತ್ ಪುತ್ರ ಅಂತ ಮೊನ್ನೆಯಷ್ಟೇ ಅಪ್ಪು ಪ್ರೀತಿ ಮೆರೆದಿದ್ದ ರಾಘವೇಂದ್ರ ರಾಜ್ಕುಮಾರ್, ಫ್ಯಾಮಿಲಿ ಸಮೇತ ಬೆಂಗಳೂರಿನ ಮೆಜೆಸ್ಟಿಕ್ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಕಣ್ತುಂಬಿಕೊಂಡ್ರು. ಈಗಷ್ಟೇ ಗುರು ಯುವನಾಗಿ ಸಿನಿಮಾಜೀವನ ಶುರುಮಾಡಿದ್ದಾನೆ. ಅವನಿಗೆ ಅಪ್ಪುನೇ ತಂದೆ, ಅಶ್ವಿನಿನೇ ತಾಯಿ..! ಪುನೀತ್ ಆಸೆಯಂತೆ ಹೊಂಬಾಳೆ ಫಿಲಂಸ್ ಯುವನನ್ನ ಲಾಂಚ್ ಮಾಡಿದ್ದಾರೆ. ಸಿನಿಮಾ ನೋಡ್ತಾ ನಾನು ಮೌನಕ್ಕೆ ಜಾರಿಬಿಟ್ಟೆ ಅಂತ ವನ್ ಲೈನ್ ಯುವ ರೆಸ್ಪಾನ್ಸ್ ಕೊಟ್ರು ರಾಘಣ್ಣ.
‘ಜೊತೆಗಿರದ ಜೀವ ಎಂದೆಂದಿಗೂ ಜೀವಂತ’ ಅಂತ ಪುನೀತ್ ಯುವನಲ್ಲೇ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಯುವನ ಮೊದಲಹೆಜ್ಜೆಯನ್ನೇ ಈ ಪಾಟಿ ಸಂಭ್ರಮಿಸಿದ್ದಾರೆ. ದೊಡ್ಡ ಇತಿಹಾಸಗಳಿಗೆ ಚಿಕ್ಕಹೆಜ್ಜೆಗಳೇ ದಾರಿ ಎನ್ನಬಹುದಾ..? ಯುವ ಸಿನಿಮಾವನ್ನ ಚಿತ್ರಮಂದಿರಗಳಲ್ಲೇ ಒಮ್ಮೆ ನೋಡಿದ್ರೆ ಅಭಿಮಾನ ಅಜರಾಮರ..!
-ಮಾವಳ್ಳಿ ಕಾರ್ತಿಕ್. ಫಿಲಂ ಡೆಸ್ಕ್. ಪ್ರಜಾಟಿವಿ