ನವದೆಹಲಿ: ಝೊಮ್ಯಾಟೋ ಡೆಲಿವರಿ ಸಿಬ್ಬಂದಿ (Zomato Delivery Executive) ಒಬ್ಬ ತನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿರುವ ಘಟನೆ ನಡೆದಿದೆ. ಯುವಕನನ್ನು ಕರಣ್ ಆಪ್ಟೆ (Karan Apte Birthday) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಕರಣ್ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನ್ನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಬೇಕು ಎಂಬುದಾಗಿ ನಿರ್ಧರಿಸಿದ್ದಾರೆ.ಮೊದಲು ತನಗೊಂದು ಹೊಸ ಬಟ್ಟೆಯನ್ನು ಖರೀದಿಸಿದ್ದಾರೆ. ನಂತರ ತಾನು ಡೆಲಿವರಿ ಮಾಡುವ ಆಹಾರದಲ್ಲಿ ಚಾಕ್ಲೇಟ್ ಇಟ್ಟು ಗ್ರಾಹಕರಿಗೆ ತಲುಪಿಸಿದ್ದರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಗ್ರಾಹಕರಿಗೆ ಕೊಡುವ ಫುಡ್ ಮೇಲೆ ಚಾಕ್ಲೇಟ್ ಇಟ್ಟು ನೀಡುತ್ತಿಒರುವ ಫೋಟೋವೊಂದನ್ನು ಆಪ್ಟೆ ತನ್ನ ಫೇಸ್ಬುಕ್ (Facebook) ಅಕೌಂಟ್ನಿಂದ ಶೇರ್ ಮಾಡಿದ್ದಾರೆ.
ಈ ಫೋಟೋ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಆಪ್ಟೆ ತಾನು ಶೇರ್ ಮಾಡಿದ ಫೋಟೋ ಜೊತೆಗೆ ಇವತ್ತು ನನ್ನ ಹುಟ್ಟುಹಬ್ಬ. ಹೀಗಾಗಿ ನನಗೊಂದು ಹೊಸ ಬಟ್ಟೆ ಖರೀದಿಸಿದ್ದೇನೆ. ಅಲ್ಲದೆ ನಾನು ಝೊಮ್ಯಾಟೋದಲ್ಲಿ ವಿತರಿಸಿದ ಪ್ರತಿಯೊಂದು ಆರ್ಡರ್ನೊಂದಿಗೆ ಚಾಕ್ಲೇಟ್ಗಳನ್ನೂ ನೀಡಿದ್ದೇನೆ. ಈ ಮೂಲಕ ಇನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೇನೆ ಎಂದು ಆಪ್ಟೆ ಬರೆದುಕೊಂಡಿದ್ದಾರೆ.ಈ ಪೋಸ್ಟ್ ನೋಡಿದ ಕೆಲವರು, ಈ ಯುವಕನ ಹುಟ್ಟುಹಬ್ಬವನ್ನು ಝೋಮ್ಯಾಟೋ ಕಂಪನಿ ಆಚರಿಸಿ ಆತನಿಗೆ ಒಂದು ಉತ್ತಮ ಉಡುಗೊಡೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಈ ರೀತಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಯುವಕನಿಗೆ ಶುಭಾಶಯಗಳು ಸುರಿಮಳೆಗೈದಿದ್ದಾರೆ. ಈ ಬೆನ್ನಲ್ಲೇ ಝೋಮ್ಯಾಟೋ ಕಂಪನಿ ಕೂಡ ಯುವಕನಿಗೆ ಕೇಕ್ ಕಳುಹಿಸಿದೆ. ಇದರ ಫೋಟೋವನ್ನು ಕೂಡ ಆಪ್ಟೆ ತನ್ನ ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದು, ಥ್ಯಾಂಕ್ಯೂ ಎಂದು ಆಪ್ಟೆ ಹೇಳಿದ್ದಾರೆ.