ಉತ್ತರ ಕರ್ನಾಟಕ ಭಾಗದ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇಂದು ವಿದ್ಯುಕ್ತವಾಗಿ ಚಾಲನೆ ದೊರೆತಿದೆ. ವಿದ್ಯಾಕಾಶಿ, ಪೇಡಾ ನಗರಿಗೆ ಇದೀಗ ಮತ್ತೊಂದು ಕಿರಿಟ್ ಸಿಕ್ಕಿದ್ದು, ಹೊಸ ಬ್ಬಳ್ಳಿ ಧಾರವಾಡ ಜನರ ಖುಷಿ ಮತ್ತಷ್ಟು ಹೆಚ್ಚಿಸಿದೆ. ಅದರ ಕುರಿತು ಒಂದು ವರದಿ ಇಲ್ಲಿದಡ ನೋಡಿ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇಂದು ಧಾರವಾಡ-ಬೆಂಗಳೂರು ಮಧ್ಯೆ ಸಂಚಾರ ಮಾಡಲಿರುವ ರಾಜ್ಯದ ಎರಡನೇ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಧಾರವಾಡದ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದ ನಂತರ ಧಾರವಾಡ ಬೆಂಗಳೂರು ವಂದೇ ಭಾರತ ರೈಲಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. ಇಂದು ಧಾರವಾಡ ನಗರಕ್ಕೆ ಮಹತ್ವದ ದಿನವಾಗಿದ್ದು, ಐತಿಹಾಸಿಕ ದಿನಕ್ಕೆ ನಾವು ಎದುರು ನೋಡುತ್ತಿದ್ದೆವು ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಖುಷಿ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಒಂದೇ ಭಾರತ ಎಕ್ಸ್ಪ್ರೆಸ್ ಟ್ರೈನ್ ಸಮಯ ಬದಲಾವಣೆ ಮಾಡುವುದಾಗಿ ಭರವಸೆ ನೀಡಿದರು.
ಧಾರವಾಡದಿಂದ ಹೊರಟ ವಂದೇ ಭಾರತ ಎಕ್ಸ್ಪ್ರೆಸ್ ರೈಲು ಹುಬ್ಬಳ್ಳಿ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು. ಸ್ವತಃ ರಾಜ್ಯಪಾಲ್ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಎಸ್.ವಿ.ಸಂಕನೂರ ಕೂಡ ವಂದೇ ಭಾರತ ರೈಲಿನಲ್ಲಿ ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳೆಸಿ ಮೂಲಕ ಗಮನ ಸೆಳೆದರು. ಇನ್ನೂ ರೈಲಿನಲ್ಲಿ ಉಪಹಾರ ಸವಿದ ರಾಜ್ಯಪಾಲರು ಹಾಗೂ ಕೇಂದ್ರ ಸಚಿವರು ಇಡ್ಲಿ ವಡಾ ಸವಿದು ಪ್ರಯಾಣ ಮಾಡಿರುವುದು ವಿಶೇಷವಾಗಿತ್ತು.
ಈ ಮೊದಲು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಧಾರವಾಡ ಜನರು ರೈಲನ್ನು ಕಂಡು ಫುಲ್ ಖುಷ್ ಆದ್ರು. ರೈಲಿನ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಅಲ್ಲದೇ ಧಾರವಾಡದಿಂದ ಆರಂಭವಾಗಿರೋ ಸಂಚಾರ ತುಂಬಾ ಖುಷಿ ಕೊಟ್ಟಿದೆ ಅಂತ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಒಟ್ಟಿನಲ್ಲಿ ಉತ್ತರ ಕರ್ನಾಟಕ ಹಾಗೂ ಹುಬ್ಬಳ್ಳಿ ಧಾರವಾಡ ಜನತೆಯ ಬಹುನಿರೀಕ್ಷಿ ಟ್ರೈನಗೆ ಇಂದು ವಿದ್ಯುಕ್ತವಾಗಿ ಚಾಲನೆ ದೊರೆತಿದ್ದು, ಅವಳಿನಗರ ಜನತೆ ಸೇರಿದಂತೆ ಉತ್ತರ ಕರ್ನಾಟಕ ಸಾರ್ವಿನಿಕರ ಸಂತಸವನ್ನು ಹೆಚ್ಚಿಸಿದೆ.