ಹೈದರಾಬಾದ್: ಆತನ ಹೆಸರು ಮುನ್ಶಿ ಪ್ರಕಾಶ್. ತೆಲಂಗಾಣದ ಮೆಹಬೂಬಾಬಾದ್ ನ ಬಯ್ಯಾರಾಮ್ ಮಂಡಲಂನ ನಿವಾಸಿ. ಇಂಜಿನಿಯರ್ ಪದವೀಧರನಾಗಿದ್ದ ಆತ ಉದ್ಯೋಗದ ಹುಡುಕಾಟದಲ್ಲಿದ್ದ. ಅದಕ್ಕಾಗಿ, ಕೆಲವು ಜಾಬ್ ವೆಬ್ ಸೈಟ್ ಗಳಲ್ಲಿ ತನ್ನ ಪ್ರೊಫೈಲ್ ಅಪ್ಡೇಟ್ ಮಾಡಿ ಕೆಲಸಕ್ಕಾಗಿ ಯಾವುದಾದರೂ ಕಂಪನಿಯಿಂದ ಫೋನ್ ಕಾಲ್ ಬರಬಹುದು ಎಂದು ಕಾತುರದಿಂದ ಕಾಯುತ್ತಿದ್ದ.
ಮಾಧ್ಯಮಗಳ ಮುಂದೆ ಇಷ್ಟು ಹೇಳುವಷ್ಟರಲ್ಲಿ ಪ್ರಕಾಶ್ ಬಸವಳಿದರು. ಆ ಕರಾಳ ಘಟನೆಯನ್ನು ನೆನೆದಷ್ಟೂ ನಾಲಿಗೆಯು ಭಯದಿಂದ ತಡವರಿಸುತ್ತಿತ್ತು….. ಅದರೂ ಸಂಭಾಳಿಸಿಕೊಂಡು ಟವರ್ ನಲ್ಲಿ ತಾವಿದ್ದ ಪರಿಸ್ಥಿತಿ, ತಮ್ಮನ್ನು ಬಳಸಿಕೊಂಡ ರೀತಿಯ ಜೊತೆಗೆ, ಆನ್ ಲೈನ್ ಫ್ರಾಡಿಂಗ್ ಎಂಬ ಮೋಸದ ಹೊಸತೊಂದು ಮುಖವನ್ನು ತೆರೆದಿಟ್ಟರು. ಅಷ್ಟೇ ಅಲ್ಲ, ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತದ ಅನೇಕ ಮುಗ್ಧ ಪದವೀಧರರು ತಮ್ಮಂತೆಯೇ ಅನುಭವಿಸುತ್ತಿರುವ ಮಾನಸಿಕ ಹಿಂಸೆಯನ್ನು ತೆರೆದಿಟ್ಟರು