ನಮಗೆ ಒಣ ದ್ರಾಕ್ಷಿ, ಬಾದಾಮಿ, ಗೋಡಂಬಿ ಇವುಗಳ ಉಪಯೋಗದ ಬಗ್ಗೆ ಗೊತ್ತಿದೆ ಆದರೆ, ಕಪ್ಪು ಒಣದ್ರಾಕ್ಷಿಯ ಬಗೆಗಿನ ಮಾಹಿತಿ ಹೆಚ್ಚು ಜನರಿಗೆ ತಿಳಿದಿಲ್ಲ. ಅಂತಹ ಮಹತ್ವಪೂರ್ಣ ಮಾಹಿತಿಯನ್ನ ನಾವು ನಿಮಗೆ ತಿಳಿಸಿಕೊಡ್ತೀವಿ.
ದ್ರಾಕ್ಷಿ ಹಣ್ಣನ್ನ ಹಾಗೆ ತಿಂದರು ಕೂಡ ರುಚಿ ಎನಿಸುತ್ತೆ, ಹಾಗೆ ಸಿಹಿ ತಿಂಡಿಗಳಲ್ಲಿ ಬಳಸಿ ತಿಂದ್ರು ಕೂಡ ಚೆನ್ನ. ನಮಗೆ ಗೊತ್ತೊ ಗೊತ್ತಿಲ್ಲದೇನೊ ನಾವು ಕಪ್ಪು ದ್ರಾಕ್ಷಿಯನ್ನ ಬಳಕೆಮಾಡುತ್ತೇವೆ. ಯಾವ ಪದಾರ್ಥವನ್ನಾದರೂ ಸರಿ ಅದರ ಲಾಭಾಂಶಗಳನ್ನ ತಿಳಿದುಕೊಂಡು ಅದನ್ನ ಸರಿಯಾದ ರೀತಿಯಲ್ಲಿ ಸೇವಿಸಿದರೆ ಬಹಳಷ್ಟು ಉಪಯುಕ್ತ. ಹಾಗೆಯೇ ಕಪ್ಪು ಒಣದ್ರಾಕ್ಷಿಯಿಂದ ನಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನವನ್ನ ತಿಳಿದರೆ ನಿಜಕ್ಕೂ ಅಚ್ಚರಿಯಾಗೋದು ಖಂಡಿತ.
ಕಪ್ಪು ಒಣ ದ್ರಾಕ್ಷಿಯನ್ನ ತಿನ್ನೋದ್ರಿಂದ ಸಿಗುವ ಲಾಭಗಳು:
1. ರಕ್ತದ ಶುದ್ಧೀಕರಣ
2. ಕೂದಲಿನ ಆರೋಗ್ಯ
3. ಮೂಳೆಗಳ ಆರೋಗ್ಯ
4. ಅಧಿಕ ರಕ್ತದ ಒತ್ತಡದ ನಿಯಂತ್ರಣ
5. ಕೊಲೆಸ್ಟ್ರಾಲ್ ನಿಯಂತ್ರಣ
6. ಹಲ್ಲುಗಳ ಆರೋಗ್ಯ