ರಾಂಗ್ ರೂಟ್ ನಲ್ಲಿ ಕಾರು ಚಲಾಯಿಸಿದ್ದಲ್ಲದೇ, ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದ ತೆಲುಗು ನಟಿ ಸೌಮ್ಯ ಜಾನು ಕೊನೆಗೂ ಕ್ಷಮೆ ಯಾಚಿಸಿದ್ದಾರೆ. ತಾನು ಮಾಡಿದ ತಪ್ಪಿನ ಅರಿವಾದ ಬಳಿಕ ಕ್ಷಮೆ ಕೇಳಿದ್ದಾರೆ.
ನಟಿ ಸೌಮ್ಯ ಜಾನು ವಿರುದ್ಧ ಹೈದರಾಬಾದ್ ನ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಾಯಿಗೆ ಔಷಧಿ ತರಬೇಕಾದ ತುರ್ತು ಕಾರಣದಿಂದಾಗಿ ರಾಂಗ್ ರೂಟ್ ನಲ್ಲಿ ಬಂದೆ. ಪೊಲೀಸರು ನನಗೆ ಕೆಟ್ಟದಾಗಿ ನಿಂದಿಸಿದರು ಎಂದು ನಟಿ ಹೇಳಿಕೊಂಡಿದ್ದರು.
ರಾಂಗ್ ರೂಟ್ ನಲ್ಲಿ ಬಂದ ನಟಿಯ ಕಾರನ್ನು ತಡೆದ ಟ್ರಾಫಿಕ್ ಹೋಮ್ ಗಾರ್ಡ್ ದಂಡ ಕಟ್ಟುವಂತೆ ಹೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ಮಧ್ಯ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಹೋಮ್ ಗಾರ್ಡ್ ಸಮವಸ್ತ್ರ ಹರಿದಿತ್ತು. ಈ ವಿಡಿಯೋ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸೌಮ್ಯ ಜಾನು ಕುಡಿದು ಕಾರು ಚಲಾಯಿಸುತ್ತಿದ್ದರು ಎಂದು ಕೆಲವರು ಹೇಳಿದ್ದರು. ಆದರೆ, ಸೌಮ್ಯಗೆ ಕುಡಿಯುವ ಅಭ್ಯಾಸವಿಲ್ಲ ಎಂದು ನಟಿ ಹೇಳಿಕೊಂಡಿದ್ದರು. ಪೊಲೀಸ್ ತಮ್ಮೊಂದಿಗೆ ಅನುಚಿತ ವರ್ತನೆ ಮಾಡಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣ ಎಂದಿದ್ದರು ನಟಿ. ಇದೀಗ ನಟಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ.