ಬೆಂಗಳೂರು : ನಮ್ಮ ಪಕ್ಷ ಯುದ್ದಕ್ಕೆ ಸಿದ್ದವಾಗಿದೆ. ಶಸ್ತ್ರ ತ್ಯಾಗ ಮಾಡಲ್ಲ, ಯುದ್ದ ಮಾಡೇ ಮಾಡ್ತೀವಿ. ಯಾರನ್ನು ಆಯ್ಕೆ ಮಾಡಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಮುನಿಯಪ್ಪ ಪುತ್ರಿ ಹಾಗೂ ಶಾಸಕಿ ರೂಪಕಲಾ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಕುಟುಂಬಕ್ಕಿಂತ ನಮಗೆ ಪಕ್ಷವೇ ಮುಖ್ಯ. ಪಕ್ಷಕ್ಕಾಗಿ ಎಂಥಾ ತ್ಯಾಗಕ್ಕೂ ಸಿದ್ದ ನಾವು. ಪಕ್ಷದ ವಿರುದ್ಧ ಧ್ವನಿ ಎತ್ತಲ್ಲ ನಮ್ಮ ಕುಟುಂಬ. ನಾವು ಯಾವತ್ತು ಪಕ್ಷ ತಲೆತಗ್ಗಿಸುವ ಕೆಲಸ ಮಾಡಲ್ಲ ಎಂದು ತಿಳಿಸಿದರು.
ರಾಜಕೀಯದಲ್ಲಿ ಒಂದೊಂದು ಕುಟುಂಬದ ವಿರುದ್ಧ ಭಿನ್ನಾಭಿಪ್ರಾಯ ಬರೋದು ಸಹಜ. ಇಷ್ಟು ವರ್ಷ ರಾಜಕಾರಣ ಮಾಡಿದ ಕುಟುಂಬ, ಎಲ್ಲರನ್ನು ನಮ್ಮ ಪರ ಇಟ್ಟುಕೊಳ್ಳೋಕಾಗಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಮಾಡೋರು ಬೇಕು. ಅದು ತಪ್ಪಲ್ಲ. ಆದ್ರೆ, ಆ ವಿರೋಧ ಪಕ್ಷದ ಇತಿಮಿತಿಯಲ್ಲಿ ಇರಬೇಕು. ಪಕ್ಷದೊಳಗಿನ ವೇದಿಕೆಯಲ್ಲಿ ಮಾತನಾಡಬೇಕು. ಪಕ್ಷದ ಹಿರಿಯರು AICC ಅಧ್ಯಕ್ಷರು ಸಿಎಂ, ಡಿಸಿಎಂ ಇದ್ದಾರೆ, ಅವರಿಗೆ ಹೇಳಬೇಕು ಎಂದು ಕುಟುಕಿದರು.
ರಾಜಕೀಯದಲ್ಲಿ ಒಂದೊಂದು ಕುಟುಂಬದ ವಿರುದ್ಧ ಭಿನ್ನಾಭಿಪ್ರಾಯ ಬರೋದು ಸಹಜ ಇಷ್ಟು ವರ್ಷ ರಾಜಕಾರಣ ಮಾಡಿದ ಕುಟುಂಬ ಎಲ್ಲರನ್ನು ನಮ್ಮ ಪರ ಇಟ್ಟುಕೊಳ್ಳೋಕಾಗಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಮಾಡೋರು ಬೇಕು, ತಪ್ಪಲ್ಲಆದ್ರೆ ಆ ವಿರೋಧ ಪಕ್ಷದ ಇತಿಮಿತಿಯಲ್ಲಿ ಇರಬೇಕು, ಪಕ್ಷದೊಳಗಿನ ವೇದಿಕೆಯಲ್ಲಿ ಮಾತನಾಡಬೇಕು
ಕೋಪ, ಅಸೂಯೆ, ದ್ವೇಶದಿಂದ ಒಬ್ಬರನ್ನು ಮುಗಿಸ್ತೀವಿ ಅಂದ್ಕೊಂಡಿದ್ದಾರೆ ದೇವರಿಗಿಂತ ಯಾರು ದೊಡ್ಡೋರಲ್ಲ, ನಾವು ಜನಗಳ ಆಶೀರ್ವಾದದಿಂದ ಗೆದ್ದು ಬರ್ತೀವಿನಮ್ಮ ತಂದೆಯವರು 5 ವರ್ಷದಿಂದ ಹೇಳ್ತಿದ್ದರು, ಕುತಂತ್ರ ನಡಿತಿದೆ ಅಂತಯಾವುದೋ ಒಂದು ವಿಚಾರ ಇಟ್ಕೊಂಡು ಪಕ್ಷಕ್ಕೆ ಮುಜುಗರ ತರೋದು ಒಳ್ಳೇದಲ್ಲಮುನಿಯಪ್ಪ ಕುಟುಂಬ ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ರೆ ಒಪ್ತೀರಾ ಎಂಬ ವಿಚಾರ
ನಾವು ಪಕ್ಷದ ವಿರುದ್ಧ ನಡೆದುಕೊಳ್ಳಲ್ಲನಮಗೆ ಅವಮಾನ ಮಾಡಿದ್ರೆ ಸಹಿಸ್ಕೊತೀವಿ, ಪಕ್ಷಕ್ಕೆ ಅವಮಾನ ಆದ್ರೆ ಸಹಿಸ್ಕೊಳಲ್ಲನಮಗೆ ಅವಮಾನ ಆದ್ರು ಹಲ್ಲು ಕಡಿದುಕೊಂಡು ಇರ್ತೀವಿ, ಜನ ಉತ್ತರ ಕೊಡ್ತಾರೆಮುನಿಯಪ್ಪ ಕುಟುಂಬದಿಂದ ಕಿರುಕುಳ ಆಗಿದೆ ಎಂಬ ವಿಚಾರರಮೇಶ್ ಕುಮಾರ್ ಬಣದ ವಿರುದ್ಧ ರೂಪಕಲಾ ಆಕ್ರೋಶನಾನು ಯಾರ ಬಗ್ಗೆನು ಹೇಳಿಕೆ ಕೊಡಲ್ಲಏನೇ ಭಿನ್ನಾಭಿಪ್ರಾಯ, ಕಿರುಕುಳ ಆಗಿದ್ರು ಕೇಳೋಕೆ, ಹೇಳೋಕೆ ದೊಡ್ಡವರು ಇದ್ದಾರೆಕಿರುಕುಳ ಕೊಟ್ಟಿದ್ರೆ ಸುರ್ಜೆವಾಲ ಅವರಿಗೆ ಹೇಳಬಹುದಿತ್ತು, ಏಕೆ ಏಳಲಿಲ್ಲಮಾಧ್ಯಮದ ಮುಂದೆ ಬಂದು ಸುಮ್ಮನೆ ಮಾತನಾಡೋದಲ್ಲ ಎಂದರು.