ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತಿ ರಣ್ವೀರ್ ಸಿಂಗ್ ಮತ್ತು ಕುಟುಂಬದ ಇತರ ಸದಸ್ಯರೊಟ್ಟಿಗೆ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ಆಗಮಿಸಿದ್ದಾರೆ. ದಕ್ಷಿಣ ಮುಂಬೈನ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದೀಪಿಕಾ ದಾಖಲಾಗಿದ್ದು, ರಣ್ವೀರ್ ಹಾಗೂ ದೀಪಿಕಾ ಆಸ್ಪತ್ರೆ ಒಳಗೆ ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿದೆ.
ಇದೇ ತಿಂಗಳ 28 ಕ್ಕೆ ದೀಪಿಕಾಗೆ ಡೆಲಿವರಿ ಡೇಟ್ ನೀಡಲಾಗಿತ್ತು. ಅದೇ ದಿನ ದೀಪಿಕಾರ ಮಾಜಿ ಪ್ರಿಯಕರ ರಣ್ಬೀರ್ ಕಪೂರ್ ಹುಟ್ಟುಹಬ್ಬವೂ ಸಹ ಇತ್ತು. ಸೆಪ್ಟೆಂಬರ್ 20ರ ಮೇಲೆಯೇ ದೀಪಿಕಾಗೆ ಮಗು ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಇಂದು ಅಚಾನಕ್ಕಾಗಿ ದೀಪಿಕಾ ಹಾಗೂ ರಣ್ವೀರ್ ಸಿಂಗ್ ಅವರುಗಳು ಆಸ್ಪತ್ರೆಗೆ ಬಂದಿರುವುದು ಗಮನಿಸಿದರೆ ಸದ್ಯದಲ್ಲೇ ದೀಪಿಕಾಗೆ ಮಗು ಜನಿಸಲಿದೆ ಎನ್ನಲಾಗುತ್ತಿದೆ.
ಸೆಪ್ಟೆಂಬರ್ 07 ಬೆಳಿಗ್ಗೆಯಷ್ಟೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರುಗಳು ಮುಂಬೈನಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡಿದ್ದರು. ಇಬ್ಬರೂ ಒಟ್ಟಿಗೆ ತೆರಳಿ ಗಣೇಶನ ದರ್ಶನ ಮಾಡಿ ಬಂದಿದ್ದರು. ವಿಶೇಷ ಪೂಜೆಯನ್ನು ಸಹ ಮಾಡಿಸಿದ್ದರು. ಗಣೇಶನ ದರ್ಶನಕ್ಕೆ ಆಗಮಿಸಿದ್ದ ವೇಳೆ ದೀಪಿಕಾ ಆರಾಮವಾಗಿಯೇ ಇದ್ದರು, ಯಾವುದೇ ಬಳಲಿಕೆ ಇದ್ದಂತಿರಲಿಲ್ಲ. ಆದರೆ ಸಂಜೆ ವೇಳೆಗೆ ಹಠಾತ್ತನೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರುಗಳು 2018ರ ನವೆಂಬರ್ 14 ರಂದು ಮದುವೆಯಾಗಿದ್ದರು. ಮದುವೆಯಾದ ಆರು ವರ್ಷಗಳ ಬಳಿಕ ದಂಪತಿ ಮೊದಲ ಮಗುವಿನ ಆಗಮಗದ ಸಂಭ್ರಮದಲ್ಲಿದ್ದಾರೆ. ಕಳೆದ ಎರಡು ಮೂರು ದಿನಗಳ ಹಿಂದಷ್ಟೇ ದೀಪಿಕಾ ಬೇಬಿ ಬಂಪ್ ಫೋಟೋ ಶೂಟ್ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.