ಭಾರತವು ಅನೇಕ ವಲಯಗಳಲ್ಲಿ ಅಭಿವೃದ್ಧಿಗೊಳಿಸಲು ಶ್ರಮಿಸುತ್ತಿದೆ. ಅವುಗಳಲ್ಲಿ ರೈಲುಗಳು ಕೂಡ ಸೇರಿವೆ. ವಂದೇ ಭಾರತ್ ರೈಲುಗಳ ನಂತರ, ವೇಗವಾಗಿ ಓಡುವ ಬುಲೆಟ್ ಟ್ರೈನ್ ಅನ್ನು ಅಭಿವೃದ್ದಿಗೊಳಿಸಲಾಗುತ್ತದೆ. 2026ಕ್ಕೆ ಭಾರತದ ಮೊದಲ ಬುಲೆಟ್ ಟ್ರೈನ್ ಸಂಚರಿಸಲಿದೆ ಎನ್ನುವ ಮಾಹಿತಿಯನ್ನು ಕೇಂದ್ರ ರೈಲ್ವೆ ಸಚಿವ ಡಾ. ಅಶ್ವಿನಿ ವೈಷ್ಣವ್ ನೀಡಿದ್ದಾರೆ. ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸಚಿವರು, ಗುಜರಾತ್ನ ಸೂರತ್ನಿಂದ ಬಿಲಿಮೋರಾವರೆಗೆ ಈ ಬುಲೆಟ್ ಟ್ರೈನ್ ಓಡಾಡುವ ಸಾಧ್ಯತೆ ಇದೆ.
ಮುಂಬೈ ಅಹ್ಮದಾಬಾದ್ ಹೈಸ್ಪೀಡ್ ರೈಲ್ ಪ್ರಾಜೆಕ್ಟ್ನ ಭಾಗವಾಗಿ ಅದೇ ಟ್ರ್ಯಾಕ್ನಲ್ಲಿ ಸೂರತ್-ಬಿಲಿಮೊರಾ ಟ್ರ್ಯಾಕ್ ಮೊದಲು ಸಿದ್ಧಗೊಳ್ಳುತ್ತಿದೆ. 2026ಕ್ಕೆ ಇದು ಮುಗಿದು, ಈ ಟ್ರ್ಯಾಕ್ನಲ್ಲಿ ಬುಲೆಟ್ ಟ್ರೈನ್ ಓಡುತ್ತದೆ. ಮುಂಬೈನಿಂದ ಅಹ್ಮದಾಬಾದ್ವರೆಗೆ 508 ಕಿಮೀ ಉದ್ದದ ಪೂರ್ಣ ಟ್ರ್ಯಾಕ್ 2028ಕ್ಕೆ ಸಿದ್ಧಗೊಳ್ಳಬಹುದು. ಇದು ಹೌದಾದರೆ, ಮೂಲ ಗುರಿಗಿಂತ ಆರು ವರ್ಷ ಮೊದಲೇ ಪ್ರಾಜೆಕ್ಟ್ ಪೂರ್ಣಗೊಂಡಂತಾಗುತ್ತದೆ.
ಹೈಸ್ಪೀಡ್ ರೈಲು ಯೋಜನೆಯಲ್ಲಿ ಏಳು ಕಾರಿಡಾರ್ಗಳನ್ನು ಕೇಂದ್ರ ಸರ್ಕಾರ ಆಯ್ದುಕೊಂಡಿದೆ. ಅದರಲ್ಲಿ ಬೆಂಗಳೂರಿನಿಂದ ಚೆನ್ನೈವರೆಗಿನ ಬುಲೆಟ್ ಟ್ರ್ಯಾಕ್ ಕೂಡ ಒಂದು. ಮುಂಬೈ ಅಹ್ಮದಾಬಾದ್ ಎಚ್ಎಸ್ಆರ್ ಪ್ರಾಜೆಕ್ಟ್ ಒಂದು ರೀತಿಯ ಪೂರ್ವಬಾವಿ ತಯಾರಿಯಂತಿದೆ. ಈ ಯೋಜನೆ ಎಷ್ಟು ಬೇಗ ಪೂರ್ಣಗೊಳ್ಳುತ್ತದೆ, ಅದರ ಆಧಾರದ ಮೇಲೆ ಮೇಲಿ ಏಳು ಯೋಜನೆಗಳಿಗೆ ಗುರಿ ನಿಗದಿ ಮಾಡಲು ನಿರ್ಧರಿಸಲಾಗಿದೆ. ಚೆನ್ನೈ ಟು ಮೈಸೂರು ಹೈಸ್ಪೀಡ್ ರೈಲು ಯೋಜನೆಗೆ ಮೂಲ ಡೆಡ್ಲೈನ್ 2051 ಎಂದು ಇದೆಯಾದರೂ ಇನ್ನಷ್ಟು ಬೇಗ ಪೂರ್ಣಗೊಳ್ಳಲು ಹೊಸ ಗಡುವು ನಿಗದಿ ಮಾಡಬಹುದು.
ಹೈಸ್ಪೀಡ್ ರೈಲು ಕಾರಿಡಾರ್ಗಳಿವು…
- ಮುಂಬೈನಿಂದ ಅಹ್ಮದಾಬಾದ್ವರೆಗೆ – 508 ಕಿಮೀ
- ಮುಂಬೈನಿಂದ ಹೈದರಾಬಾದ್ವರೆಗೆ – 671 ಕಿಮೀ
- ಮುಂಬೈನಿಂದ ನಾಗಪುರ್ವರೆಗೆ: 765 ಕಿಮೀ
- ದೆಹಲಿಯಿಂದ ವಾರಾಣಸಿ – 813 ಕಿಮೀ
- ದೆಹಲಿಯಿಂದ ಅಹ್ಮದಾಬಾದ್ – 878 ಕಿಮೀ
- ದೆಹಲಿಯಿಂದ ಚಂಡೀಗಡ್ ಮತ್ತು ಅಮೃತಸರ್ – 459 ಕಿಮೀ
- ವಾರಾಣಸಿಯಿಂದ ಹೌರಾ – 760 ಕಿಮೀ
- ಚೆನ್ನೈನಿಂದ ಮೈಸೂರುವರೆಗೆ ವಯಾ ಬೆಂಗಳೂರು – 435 ಕಿಮೀ