ರಾಜ್ಯದಾದ್ಯಂತ ಡೆಂಗ್ಯೂ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿಯೇ ಶೇ.50ರಷ್ಟು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ.ಈ ಮಧ್ಯೆ, ಬೆಂಗಳೂರಿನಲ್ಲಿ ಡೆಂಗ್ಯೂ ಜೊತೆ ಮಲೇರಿಯಾ ವಕ್ಕರಿಸುತ್ತಿದೆ. ರಾಜಧಾನಿಯಲ್ಲಿ ಶೇ 80 ರಷ್ಟು ಡೆಂಘೀ ಕೇಸ್ ಕಂಡುಬಂದರೆ ಶೇ 20 ರಷ್ಟು ಮಲೇರಿಯಾ ಕೇಸ್ಗಳು ಪತ್ತೆಯಾಗುತ್ತಿವೆ.
ಅದರಲ್ಲೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿವೆ. ಇದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ. ಆದರೂ ಕೂಡಾ ಸದ್ಯದ ಮಟ್ಟಿಗೆ ಡೆಂಗ್ಯೂ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ರಾಜ್ಯದ ಡಿಸಿ ಹಾಗೂ ಸಿಇಓಗಳ ಜೊತೆ ವಿಕಾಸಸೌಧದಲ್ಲಿ ತುರ್ತು ಸಭೆ ನಡೆಸಿದ್ದಾರೆ
ಮಲೇರಿಯಾ ರೋಗದಲ್ಲಿ ದಾಖಲಾಗುವ ರೋಗಿಗಳಲ್ಲಿ ತೀವ್ರ ಜ್ವರ, ಚಳಿನಡುಕ, ತಲೆನೋವು, ಮೈಕೈ ನೋವು, ವಾಂತಿ, ವಿಪರೀತ ಸುಸ್ತು ಈ ಲಕ್ಷಣಗಳು ಕಂಡುಬರುತ್ತಿವೆ. ಜೊತೆಗೆ ಡೆಂಗ್ಯೂ ಸೋಂಕಿನಲ್ಲಿಯೂ ಇದೇ ತರದ ಲಕ್ಷಣಗಳು ಕಂಡು ಬರ್ತಿದ್ದು ರೋಗಿಗಳನ್ನು ಟೆಸ್ಟ್ ಮಾಡಿದಾಗ ಮಲೇರಿಯಾ ಪತ್ತೆಯಾಗುತ್ತಿದೆ. ಸದ್ಯ, ಇತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ವಹಿಸದಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ರಕ್ತಪರೀಕ್ಷೆ ಮಾಡಿಸಲು ವೈದ್ಯರು ಸೂಚಿಸಿದ್ದಾರೆ.