ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆ ಭರದಿಂದ ಸಾಗುತ್ತಿದ್ದು, ಖ್ಯಾತ ತೆಲುಗು ಚಿತ್ರನಟ ಹಾಗೂ ಹಿಂದೂಪುರಂ ತೆಲುಗು ದೇಶಂ ಪಕ್ಷದ ಶಾಸಕ ನಂದಮೂರಿ ಬಾಲಕೃಷ್ಣ ಮತ್ತೊ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿತ್ತಿದ್ದಾರೆ.
ಈ ಹಿಂದೆ ಎರಡು ಭಾರಿ ಬಾಲಕೃಷ್ಣ ಹಿಂದೂಪುರಂ ಕ್ಷೇತ್ರದಿಂದ ಗೆದ್ದಿದ್ದಾರೆ. ಬಾಲಯ್ಯ ಹಿಂದೂಪುರಂ ಮತ್ತು ರಾಯಲಸೀಮಾ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಬಾಲಕೃಷ್ಣ ಶುಕ್ರವಾರ ಸಾಕಷ್ಟು ಸಂಖ್ಯೆಯ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಬಾಲಕೃಷ್ಣ ಪತ್ನಿ ವಸುಂಧರಾ ಅವರೊಂದಿಗೆ ಹಿಂದೂಪುರಂ ಆರ್ಡಿಒ ಕಚೇರಿಗೆ ತೆರಳಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನಂದಮೂರಿ ಬಾಲಕೃಷ್ಣ ಚುನಾವಣಾ ಅಫಿಡವಿಟ್ನಲ್ಲಿ ತಮ್ಮ ಆಸ್ತಿ ಮತ್ತು ಸಾಲವನ್ನು ಬಹಿರಂಗಪಡಿಸಿದ್ದಾರೆ.
ಬಾಲಕೃಷ್ಣ ಅಫಿಡವಿಟ್ನಲ್ಲಿ 81.63 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ಬಾಲಯ್ಯ ಪತ್ನಿ ವಸುಂಧರಾ ಅವರ ಆಸ್ತಿ 140 ಕೋಟಿ 38 ಲಕ್ಷ 83 ಸಾವಿರ ಎಂದು ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ಚುನಾವಣಾ ದಾಖಲೆಯಲ್ಲಿ ತಮಗೆ 9 ಕೋಟಿ ಸಾಲವಿದೆ ಬಾಲಯ್ಯ ತಿಳಿಸಿದ್ದಾರೆ. ಅವರ ಪತ್ನಿ ವಸುಂಧರಾ ಹೆಸರಲ್ಲಿ 3 ಕೋಟಿ 83 ಲಕ್ಷದ 98 ಸಾವಿರ ಸಾಲವಿದೆ ಎಂದು ತಿಳಿಸಲಾಗಿದೆ. ಇನ್ನು ಬಾಲಯ್ಯ ಪುತ್ರ ಮೋಕ್ಷಜ್ಞ ಹೆಸರಲ್ಲಿ 58.63 ಕೋಟಿ ಆಸ್ತಿ ಇದೆ.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಾಲಕೃಷ್ಣ, ಶಾಸಕನಾಗಿ ಹಿಂದೂಪುರ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದ್ದೆನೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಜತೆಗೆ ಮಂಡಲ, ಗ್ರಾಮಗಳಲ್ಲಿ ಸಿಸಿ ರಸ್ತೆ, ಮೋರಿಗಳನ್ನು ನಿರ್ಮಿಸಿದ್ದೇವೆ ಎಂದರು.