ಕೋಲಾರ: ಶಾಸಕಿ ರೂಪಕ್ಕನ ನೋಟು ರೂಪಕನ್ನ ಲೋನು ಎಲ್ಲಾ ರೀತಿಯಾದ ಸಿನಿಮಾಗಳನ್ನು ಜನರಿಗೆ ತೋರಿಸಿದ್ರು ಜನರು ಮರುಳಗಾದಿರುವುದಕ್ಕೆ ಇದು ಒಂದು ಸಾಕ್ಷತ್ ಚಿತ್ರ ಎಂದು ಕೆಜಿಎಫ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮೋಹನ್ ಕೃಷ್ಣ ಹೇಳಿದರು.
ಬೇತಮಂಗಲದಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ರೂಪಕ್ಕ ಎನು ಸಿನಿಮಾವನ್ನು ತೋರಿಸುವುದಕ್ಕೆ ಬಂದಿದ್ದರು ಅದನ್ನು ಗ್ರಾಮೀಣ ಭಾಗದ ಜನರು ಕಾರ್ಯಕರ್ತರು ಅವರಿಗೆ ತೋರಿಸಿದ್ದಾರೆ.
ಈ ಬಿಜೆಪಿ ಪಕ್ಷ ಬಹಳ ದೊಡ್ಡ ರಾಷ್ಟ್ರೀಯ ಪಕ್ಷ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸಚಿವರ ಪಕ್ಕದಲ್ಲಿ ನಿಂತುಕೊಳ್ಳುವಷ್ಟು ಮಟ್ಟಕ್ಕೆ ನಾನು ಅಲ್ಲ ಬೆಳೆದಿರುವುದು ನನ್ನ ಕಾರ್ಯಕರ್ತರು ನನ್ನ ಮುಖಂಡರು ಬೆಳೆಸಿದ್ದಾರೆ ನಾಲ್ಕು ವರ್ಷ ರೋಡನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿದ್ದೆ ಇವತ್ತಿನ ದಿನ ಒಬ್ಬ ಸಚಿವರ ಮುಂದೆ ನಿಂತುಕೊಂಡು ಮಾತನಾಡುವಷ್ಟು ಅರ್ಹತೆ ಕೊಟ್ಟಿರುವಂತದ್ದು ನನ್ನ ಕ್ಷೇತ್ರದ ಜನರು ನನ್ನ ಕ್ಷೇತ್ರದ ಶಕ್ತಿನೆ ಇದು.
ಬಹುಶಃ ಯಾವುದೇ ಕಾರ್ಯಕರ್ತ ಕೂಡ ಕ್ಷೇತ್ರದ ಮನೋಭಾವವನ್ನು ಅವರ ಇಷ್ಟವನ್ನು ಅರ್ಥ ಮಾಡಿಕೊಳ್ಳಲಿಲ್ಲ ಅಂದರೆ ಎನೆಲ್ಲ ಹಾಗಬಹುದು ಎಂಬುವುದಕ್ಕೆ ಇದು ಒಂದು ಉದಾಹರಣೆ ಅಲ್ಲದೇ ಕೆಜಿಎಫ್ ಕ್ಷೇತ್ರದ ಟಿಕೇಟ್ ಆಂಕಾಕ್ಷಿಯಾಗಿದ್ದೆನೆ ಸಚಿವರು ಒಂದು ಭರವಸೆಯನ್ನು ಕೊಟ್ಟಿದ್ದಾರೆ ಜನರ ಮನಸ್ಸಿನಲ್ಲಿ ಯಾರಿದ್ದಾರೆ ಅವರನ್ನು ಆಯ್ಕೆ ಮಾಡುತ್ತಿವಿ ಮಾನ ದಂಡಗಳ ಪ್ರಕಾರ ಬಿ ಫಾರ್ಂ ನೀಡಲಾಗುತ್ತದೆ ಒಟ್ಟಿನಲ್ಲಿ ಕೆಲಸ ಮಾಡಿ ಅಂತ ಹೇಳಿದ್ದಾರೆ.
ಹಾಗಾಗಿ ಕ್ಷೇತ್ರದಲ್ಲಿ ಕೆಲಸವನ್ನು ಮಾಡುತ್ತಿದ್ದೆನೆ ಪಕ್ಷವನ್ನು ಸಂಘಟನೆ ಮಾಡಲಾಗುತ್ತಿದೆ ನನ್ನ ಜೀವನದಲ್ಲಿ ಎರಡನ್ನು ನಂಬಿದ್ದಿನಿ ಒಂದು ದೇವರನ್ನು ಮತ್ತೊಂದು ನನ್ನ ಜನರನ್ನು ನಾಯಕರನ್ನು ಜನರು ಕೈಬಿಡುವುದಿಲ್ಲ ದೇವರು ಕೈಬಿಡುವುದಿಲ್ಲ ಎಲ್ಲದ್ದಕ್ಕಿಂತ ಮುಗಿಲಾಗಿ ಭಾರತೀಯ ಜನತಾ ಪಾರ್ಟಿ ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತದೆ ಎಂದು ತಿಳಿಸಿದ್ರು.
ಸಂಸದ ಎಸ್.ಮುನಿಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ,ತಾಲೂಕು ಅಧ್ಯಕ್ಷ ನಾಗೇಶ್, ಮಾಜಿ ಶಾಸಕರಾದಎಂ.ನಾರಾಯಣಸ್ವಾಮಿ,ವೆಂಟಕಮುನಿಯಪ್ಪ,ಮುಖಂಡರಾದ ವಿ.ಶೇಷು, ಕೆ.ಚಂದ್ರಾರೆಡ್ಡಿ,ಬಿ.ವಿ.ಮಹೇಶ್,ಶ್ರೀನಿವಾಸಗೌಡ,ಅಮರೇಶ್,ಬಿ.ಪಿ.ಮಹೇಶ್,ಮಾರ್ಕಂಡೇಗೌಡ,ಬತ್ತಲಹಳ್ಳಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.