ಕನ್ನಡ ಚಲನಚಿತ್ರ ಕಪ್ ಗೆ ತೆರೆಬಿದ್ದಿದೆ. ಎರಡು ದಿನಗಳ ಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಧನಂಜಯ್ ನೇತೃತ್ವದ ಗಂಗಾ ವಾರಿಯಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಗಂಗಾ ವಾರಿಯರ್ಸ್ ಮತ್ತು ರಾಷ್ಟ್ರಕೂಟ ಪ್ಯಾಂಥರ್ಸ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಗಂಗಾ ವಾರಿಯರ್ಸ್ ಚಾಂಪಿಯನ್ ಆಗಿ ಕಪ್ ಅನ್ನು ಪಡೆದುಕೊಂಡಿದೆ. ಎರಡು ದಿನಗಳ ಕಾಲ ನಡೆದ ಪಂದ್ಯಗಳಲ್ಲಿ ಆರು ತಂಡಗಳು ಭಾಗಿಯಾಗಿದ್ದವು. ತಲಾ ಎರಡು ಪಂದ್ಯಗಳನ್ನು ಆಡಿದವು. ಧನಂಜಯ್, ಗಣೇಶ್, ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ ಮತ್ತು ಧ್ರುವ ಸರ್ಜಾ ತಲಾ ಒಂದೊಂದು ತಂಡದ ನೇತೃತ್ವವಹಿಸಿದ್ದರು. ಸಿನಿಮಾ ನಟರು ಮತ್ತು ತಂತ್ರಜ್ಞರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಕೂಡ ಕನ್ನಡ ಚಲನಚಿತ್ರ ಕಪ್ ಪಂದ್ಯದಲ್ಲಿ ಭಾಗಿಯಾಗಿದ್ದರು. ಈ ಸಲದ ಪಂದ್ಯಾವಳಿ ಹಲವು ವಿಶೇಷಗಳಿಂದ ಕೂಡಿತ್ತು. ಆಡಿದ ಎರಡು ಪಂದ್ಯಗಳನ್ನು ಧನಂಜಯ ಅಂಡ್ ಟೀಮ್ ಗೆದ್ದರೆ, ಶಿವರಾಜ್ ಕುಮಾರ್ ನೇತೃತ್ವದ ತಂಡ ಒಂದೇ ಒಂದು ಪಂದ್ಯವನ್ನೂ ಗೆಲ್ಲಲಾಗಲಿಲ್ಲ. ಉಳಿದ ಎಲ್ಲ ತಂಡಗಳು ಒಂದೊಂದು…
Author: Prajatv Kannada
ಮುಂಬೈ: ನನ್ನನ್ನು ವಿಫಲ ನಾಯಕನೆಂದು ಪರಿಗಣಿಸಲಾಗಿದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಭಾವುಕರಾಗಿದ್ದಾರೆ. ಆರ್‌ಸಿಬಿ (RCB) ಪಾಡ್‌ಕಾಸ್ಟ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ನಾಯಕತ್ವದಲ್ಲಿ ಕಂಡ ವಿರೋಚಿತ ಸೋಲುಗಳನ್ನ ರಿವೀಲ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಟೀಂ ಇಂಡಿಯಾ (Team India) ನಾಯಕರಾಗಿದ್ದಾಗ ಐಸಿಸಿ ಪಂದ್ಯಗಳಲ್ಲಿ ಕಂಡ ಸೋಲುಗಳಿಂದ ತಜ್ಞರು, ಅಭಿಮಾನಿಗಳಿಂದ `ವಿಫಲ ನಾಯಕ’ ಎಂಬ ಟೀಕೆಗೆ ಗುರಿಯಾಗಿದ್ದರು ಎಂಬುದನ್ನ ನೆನಪಿಸಿಕೊಂಡಿದ್ದಾರೆ. ನಾನು ನಾಯಕನಾಗಿದ್ದಾಗ ಉನ್ನತ ಸ್ಪರ್ಧೆಗಳಲ್ಲಿ ತಂಡವನ್ನ ನಾಕೌಟ್ ಹಂತಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರೂ, ಟ್ರೋಫಿಗಳ ಕೊರತೆಯೇ ಚರ್ಚೆಯ ವಿಷಯವಾಗಿತ್ತು. ನಾನು ಯಾವಾಗಲೂ ಪಂದ್ಯವನ್ನು ಗೆಲ್ಲಬೇಕೆಂದು ಆಡುತ್ತಿದೆ. ಆದರೂ 2017ರ ಚಾಂಪಿಯನ್ಸ್ ಟ್ರೋಫಿ, 2019ರ ವಿಶ್ವಕಪ್ (ICC WorldCup) ಹಾಗೂ 2021ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಟಿ20 ವಿಶ್ವಕಪ್‌ನಲ್ಲಿ ನಾಯಕನಾಗಿದ್ದೆ. ಆದ್ರೆ ಈ ಮೂರು ಐಸಿಸಿ ಪಂದ್ಯಗಳ ನಂತರ ನನ್ನನ್ನ ವಿಫಲ ನಾಯಕ ಎಂದು ಪರಿಗಣಿಸಲಾಗಿದೆ. ಹಾಗಾಗಿ ನನ್ನನ್ನ ನಾನು ಎಂದಿಗೂ ಜಡ್ಜ್…
ಶನಿವಾರ(ಫೆ.25)ದಂದೇ ಕೆಸಿಸಿ ಸೀಸನ್ 3 ಮುಕ್ತಾಯವಾಗಿದೆ. ವಿಜಯನಗರ ಪ್ಯಾಟ್ರಿಯಾಟ್ಸ್ ಮತ್ತು ಗಂಗಾ ವಾರಿಯರ್ಸ್ (Ganga Warriors) ನಡುವೆ ನಡೆದ ಪಂದ್ಯದಲ್ಲಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದವರು ಕ್ರಿಕೆಟಿಗ ಸುರೇಶ್ ರೈನಾ (Suresh Raina). 29 ಎಸೆತಗಳಲ್ಲಿ ಅಜೇಯ 54 ರನ್ ಬಾರಿಸುವ ಮೂಲಕ ತಂಡವನ್ನು ಗೆಲ್ಲುವಂತೆ ಮಾಡಿದರು. ಅಲ್ಲದೇ, ಬೌಲಿಂಗ್ ನಲ್ಲೂ ಅವರು ಹಿಂದೆ ಬೀಳಲಿಲ್ಲ. 2 ವಿಕೆಟ್ ಪಡೆಯುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಕಾರಣವಾದರು. ಅಂತಾರಾಷ್ಟ್ರೀಯ ಪಂದ್ಯದಂತೆಯೇ ಆಯೋಜನೆ ಮಾಡಿದ್ದ ಆಯೋಜಕರಿಗೆ ಸುರೇಶ್ ರೈನಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಅದರಲ್ಲೂ ಈ ಪಂದ್ಯಾವಳಿಯಲ್ಲಿ ಆಡುವುದಕ್ಕೆ ಅವಕಾಶ ಮಾಡಿಕೊಟ್ಟ ಕಿಚ್ಚ ಸುದೀಪ್ (Kiccha Sudeep) ಅವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಇಂತಹ ಪಂದ್ಯವನ್ನು ನಾನು ಯಾವತ್ತೂ ನೋಡಿಲ್ಲ. ನನಗೆ ಇದು ಮರೆಯಲಾರದ ಕ್ಷಣವಾಗಿತ್ತು ಎಂದು ಅವರು ತಿಳಿಸಿದ್ದಾರೆ. ಈ ಬಾರಿ ಆರು ತಂಡಗಳ ನಡುವೆ ಪಂದ್ಯಾವಳಿ ಆಯೋಜನೆ ಆಗಿತ್ತು. ದಿನಕ್ಕೆ ಮೂರು ಪಂದ್ಯಗಳಂತೆ ಒಟ್ಟು ಆರು ತಂಡಗಳು ಕಪ್ ಗಾಗಿ…
ದೀಪಿಕಾ ದಾಸ್ ಸಿನಿಮಾ ರಂಗದ ಮೂಲಕವೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. ದೂಧ್ ಸಾಗರ್, ಈ ಮನಸೇ, ಡ್ರೀಮ್ ಗರ್ಲ್ ಹೀಗೆ ಕೆಲವು ಸಿನಿಮಾಗಳನ್ನು ಮಾಡಿದರು. ಎಷ್ಟೇ ಸಿನಿಮಾಗಳನ್ನು ಮಾಡಿದರೂ ಸಿನಿಮಾ ರಂಗ ಮಾತ್ರ ಕೈ ಹಿಡಿಯಲಿಲ್ಲ. ಕನ್ನಡದಲ್ಲಿ ಮಾತ್ರವಲ್ಲ ತೆಲುಗಿಗೂ ಹೋಗಿ ಬಂದಿದ್ದು ಇದೀಗ ದೀಪಿಕಾ ದಾಸ್ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸಿನಿಮಾ ರಂಗ ಕೈ ಹಿಡಿಯದಿದ್ರು ಕಿರುತೆರೆಯಲ್ಲಿ ದೀಪಿಕಾ ದಾಸ್ ಸಾಕಷ್ಟು ಹೆಸರು ಮಾಡಿದ್ದರು. ನಾಗಿಣಿ ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾದರು. ಕಿರುತೆರೆಯಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ಪರಿಣಾಮ ಬಿಗ್ ಬಾಸ್ ಗೂ ಎಂಟ್ರಿಕೊಟ್ಟು ಬಂದಿದ್ದರು. ಬಿಗ್ ಬಾಸ್ ಮನೆಯಲ್ಲಿ ಎರಡೆರಡು ಬಾರಿ ಪ್ರವೇಶ ಮಾಡಿದ ಕೆಲವೇ ಕೆಲವು ನಟಿಯರಲ್ಲಿ ದೀಪಿಕಾ ದಾಸ್ ಕೂಡ ಒಬ್ಬರು. ಎರಡು ಬಾರಿ ಹೋದಾಗಲೂ ದೀಪಿಕಾ ಫಿನಾಲೆಗೆ ಬರುತ್ತಾರೆ, ಅವರೇ ಟ್ರೋಫಿ ವಿನ್ ಆಗುತ್ತಾರೆ ಎಂದೆಲ್ಲ ಸುದ್ದಿ ಆಯಿತು. ಅದು ನಿಜ ಎನ್ನುವಂತೆ ಅವರನ್ನು ಸಪೋರ್ಟ್ ಮಾಡಿದರು ವೀಕ್ಷಕರು. ಆದರೆ, ಫಿನಾಲೆಗೆ ಬಂದರೂ…
ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ರಂಗೇರುತ್ತಿದೆ. ಮುಂಬರುವ ಚುನಾವಣೆಗಾಗಿ ಎಲ್ಲಾ ರಾಜಕೀಯ ಪಕ್ಷದವರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇಂದು ಯಲಹಂಕ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಮುನೇಗೌಡ ಅವರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಯಲಹಂಕ ವಿಧಾನಸಭಾ ಕ್ಷೇತ್ರದ ಅದ್ದಿಗಾನಹಳ್ಳಿಯಲ್ಲಿರುವ ಪಟಾಲಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಮ್ಮ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಈ ವೇಳೆ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ನಾಯಕರಾದ ಟಿ.ಎ.ಶರವಣ ಕೂಡ ಸಾಥ್ ನೀಡಿದರು. ಇವರ ಜೊತೆ JDS ಪಕ್ಷದ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು.
ನಟ ಕಂ ನಿರ್ದೇಶಕ ನಾಗಶೇಖರ್ ಮತ್ತು ಚಕ್ರವರ್ತಿ ಚಂದ್ರಚೂಡ ಕಾಂಬಿನೇಷನ್ ನಲ್ಲಿ ‘ಪಾದರಾಯ’ ಹೆಸರಿನ ಸಿನಿಮಾ ಮೂಡಿ ಬರುತ್ತಿದೆ. ಈ ಸಿನಿಮಾಗೆ ಜಾಕ್ ಮಂಜು ಬಂಡವಾಳ ಹೂಡುತ್ತಿದ್ದಾರೆ ಎನ್ನಲಾಗಿತ್ತು. ಈ ಸಿನಿಮಾಗಾಗಿ ನಾಗಶೇಖರ್ ಅಂಜನಾದ್ರಿ ಬೆಟ್ಟ ಹತ್ತಿ, ವ್ರತ ಮಾಡಿ ತಯಾರಿ ಆಗುತ್ತಿದ್ದಾರೆ ಎನ್ನುವ ವಿಚಾರವೂ ತಿಳಿದು ಬಂದಿತ್ತು. ಆದರೆ, ಈ ಎಲ್ಲ ಸನ್ನಿವೇಶಗಳು ಬದಲಾದಂತೆ ಕಾಣುತ್ತಿದೆ. ಪಾದರಾಯ ಹೆಸರಿನಲ್ಲಿ ಹಲವರು ಹಣ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಮಾಡಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಚಂದ್ರಚೂಡ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ನಾಲ್ಕು ತಿಂಗಳ ಹಿಂದೆ “ಪಾದರಾಯ “ಎಂಬ ಶೀರ್ಷಿಕೆ ಅಡಿ ಒಂದು ಸಿನಿಮಾ ಘೋಷಣೆಯಾಯ್ತು.ಇದು ಕೇವಲ ಘೋಷಣೆಯಾಗಿಯೇ ಉಳಿಯಿತು, ಛಾಯಾಗ್ರಹಣ ಸತ್ಯ ಹೆಗಡೆ ಸಂಗೀತ ಅಜನೀಶ್ ಲೋಕನಾಥ್ ಎಡಿಟರ್ ಆಂಟೋನಿ ನಾಯಕಿಯಾಗಿ ತೆಲುಗಿನ ಗಾಯಕಿ ಮಂಗ್ಲಿ, ನಾಯಕ ನಟರಾಗಿ ನಿರ್ದೇಶಕ, ನಟ ನಾಗಶೇಖರ್ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಚಕ್ರವರ್ತಿ ಡಿಜೆ ಎಂಬ ನಾನು ಎಂದು ನಿಕ್ಕಿಯಾಗಿತ್ತು.…
ಕೊತ್ತಂಬರಿ ಸೊಪ್ಪನ್ನು ಅಡುಗೆಯಲ್ಲಿ ಸ್ವಾದ ಮತ್ತು ಕಂಪು ಹೆಚ್ಚಿಸಲು ಕೊನೆಯದಾಗಿ ಬಳಸಲಾಗುತ್ತದೆ. ಸಾಲಾಡ್, ಚಟ್ನಿ ಮೊದಲಾದವುಗಳಲ್ಲಿ ಕೊತ್ತಂಬರಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದರ ಪ್ರಯೋಜನ ಕೇವಲ ಅಡುಗೆಯಲ್ಲಿ ಮಾತ್ರವಲ್ಲ, ದೇಹದ ಆರೈಕೆಗೂ ವ್ಯಾಪಿಸಿದೆ. ಎಷ್ಟೋ ತೊಂದರೆಗಳ ಚಿಕಿತ್ಸೆಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತಿದ್ದುದು ಕೊತ್ತಂಬರಿಯಿಂದ ಅಲ್ಪವೆಚ್ಚದಲ್ಲಿ ಗುಣವಾಗಿದೆ. ಇದರಲ್ಲಿರುವ ವಿವಿಧ ಪೋಷಕಾಂಶಗಳು, ವಿಶೇಷವಾಗಿ ಪೊಟ್ಯಾಶಿಯಂ ಹಲವು ರೀತಿಯಲ್ಲಿ ದೇಹಕ್ಕೆ ಅನುಕೂಲಕರವಾಗಿದೆ. ಉಳುಕು, ಸುಟ್ಟಗಾಯ ಮೊದಲಾದವುಗಳಿಗೆ ದೇಹದ ಹೊರಗಿನಿಂದ ಆರೈಕೆ ನೀಡಿದರೆ ಆಹಾರದ ಮೂಲಕ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳಿಸುವ ಮತ್ತು ಇನ್ನೂ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಬನ್ನಿ, ಕೂದಲು ಉದುರುವುದನ್ನು ತಪ್ಪಿಸುತ್ತದೆ ಕೊತ್ತಂಬರಿಯಲ್ಲಿ ಅಧಿಕ ಪ್ರಮಾಣದಲ್ಲಿ ಪೊಟ್ಯಾಶಿಯಂ ಇದ್ದು ವಿಶೇಷವಾಗಿ ಕೂದಲ ಉದುರುವಿಕೆಗೆ ಕಾರಣವಾಗುವ ಕೂದಲ ಬುಡ ಸಡಿಲವಾಗುವುದನ್ನು ತಪ್ಪಿಸುತ್ತದೆ. ಇದಕ್ಕಾಗಿ ಒಂದು ಕಪ್ ಅಥವಾ ಉದ್ದ ಕೂದಲಿದ್ದರೆ ಇನ್ನೂ ಹೆಚ್ಚು ಕೊತ್ತಂಬರಿ ಎಲೆಗಳನ್ನು ಅರೆಯಿರಿ. ಇದರೊಂದಿಗೆ ಸಮಪ್ರಮಾಣದಲ್ಲಿ ನೆನೆಸಿಟ್ಟ ಮೆಂತೆ ಮತ್ತು ಈಗತಾನೇ ಹಿಂಡಿದ ತೆಂಗಿನ ಹಾಲನ್ನು ಮಿಶ್ರಣ ಮಾಡಿ ದಪ್ಪನೆಯ ಲೇಪನ ತಯಾರಿಸಿ.…
ಸ್ಟೇಜ್‌ಕೋಚ್: ಉತ್ತರ ನೆವಾಡಾದ ಪರ್ವತ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ವೈದ್ಯಕೀಯ ವಿಮಾನವೊಂದು ಪತನಗೊಂಡಿದ್ದು, ರೋಗಿ ಸೇರಿದಂತೆ ಒಟ್ಟು ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನೆವಾಡಾದ ಸ್ಟೇಜ್‌ಕೋಚ್ ಬಳಿ ಶುಕ್ರವಾರ ರಾತ್ರಿ 9:15 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮೃತರಲ್ಲಿ ಪೈಲಟ್, ಫ್ಲೈಟ್ ನರ್ಸ್, ಫ್ಲೈಟ್ ಪ್ಯಾರಾಮೆಡಿಕ್, ರೋಗಿ ಮತ್ತು ರೋಗಿಯ ಕುಟುಂಬದ ಸದಸ್ಯರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಹವಾಮಾನ ವೈಪರೀತ್ಯದ ನಡುವೆಯೂ ಪರ್ವತ ಪ್ರದೇಶದಲ್ಲಿ ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ವಿಮಾನದಲ್ಲಿ ಸಾಗಿಸಲಾಗುತ್ತಿತ್ತು. ಪತನಕ್ಕೀಡಾದ ಈ ವಿಮಾನ ನೆಲಕ್ಕಪ್ಪಳಿಸಿ ಹೊತ್ತಿ ಉರಿದಿದ್ದು, ಇದರಿಂದಾಗಿ, ವಿಮಾನದಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಅಧಿಕಾರಿಗಳು ಕರೆ ಸ್ವೀಕರಿಸಿದ್ದು, ನಾವು ಘಟನಾ ಸ್ಥಳಕ್ಕೆ ತಲುಪಲು ಸುಮಾರು ಎರಡು ಗಂಟೆ ಸಮಯ ತೆಗೆದುಕೊಂಡಿತು. ಅಷ್ಟರಲ್ಲಾಗಲೇ ವಿಮಾನದಲ್ಲಿದ್ದವರೆಲ್ಲರೂ ಮೃತಪಟ್ಟಿದ್ದರು ಎಂದು ಲಿಯಾನ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
ನವದೆಹಲಿ: ಪಾಕಿಸ್ತಾನದಿಂದ ಭಾರತದೊಳಗೆ ಪ್ರವೇಶಿಸಿದ್ದ ಡ್ರೋನ್‌ನ್ನು ಭಾರತೀಯ ಗಡಿ ಭದ್ರತಾ ಪಡೆಯ ಸಿಬಂದಿ ಪಂಜಾಬ್ ಗಡಿಯಲ್ಲಿ ಹೊಡೆದುರುಳಿಸಿದ್ದಾರೆ. ಭಾನುವಾರ ಮಧ್ಯರಾತ್ರಿ 2.11ರ ವೇಳೆಗೆ ಈ ಡ್ರೋನ್ ಭಾರತದೊಳಗೆ ಪ್ರವೇಶಿಸುತ್ತಿತ್ತು. ಅಮೃತ್ಸರ ಜಿಲ್ಲೆಯ ಶಹಜಾದಾ ಗ್ರಾಮದ ಬಳಿ ಡ್ರೋನ್ ಶಬ್ದ ಕೇಳಿ ತಕ್ಷಣವೇ ಬಿಎಸ್‌ಎಫ್ ಸಿಬಂದಿ ಕಾರ್ಯಾಚರಣೆಗಿಳಿದು, ಶಬ್ದ ಕೇಳಿದತ್ತ ಕೂಡಲೇ ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ. ಮೇಡ್ ಇನ್ ಚೀನಾದ ಕಪ್ಪು ಬಣ್ಣದ ಡ್ರೋನ್ ಇದಾಗಿದ್ದು, ಅವಶೇಷಗಳು ಶಹಜಾದ್ ಗ್ರಾಮದ ದುಸ್ಸಿ ಬಂದ್ ಬಳಿ ಪತ್ತೆಯಾಗಿದೆ. ಇನ್ನು ಪಾಕಿಸ್ತಾನ ಈ ಹಿಂದೆಯೂ ಭಾರತದತ್ತ ಅಕ್ರಮವಾಗಿ ಡ್ರೋನ್ ಕಳುಹಿಸಿತ್ತು. ಕಳೆದ ಡಿಸೆಂಬರ್‌ನಲ್ಲಿ ಪಂಜಾಬ್‌ನ ಅಮೃತಸರ್‌ಗೆ ಪಾಕಿಸ್ತಾನದಿಂದ ಪ್ರವೇಶಿಸಿದ್ದ ಡ್ರೋನ್‌ನ್ನು ಬಿಎಸ್‌ಎಫ್ ಸಿಬಂದಿ ಹೊಡೆದುರುಳಿಸಿದ್ದರು. ಪಾಕಿಸ್ತಾನ ಗುಪ್ತಚರ ಇಲಾಖೆಯು ಐಎಸ್‌ಐ ಡ್ರೋನ್ ಮೂಲಕ ಭಾರತದಲ್ಲಿರುವ ಉಗ್ರರಿಗೆ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳನ್ನು ಕಳುಹಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿದೆ.
ಹೈದರಾಬಾದ್: ತನ್ನ ಗೆಳತಿಗೆ (Girlfriend) ಸಂದೇಶ ಕಳುಹಿಸಿದ್ದಕ್ಕಾಗಿ ಯುವಕನೊಬ್ಬ ತನ್ನ ಸ್ನೇಹಿತನನ್ನೇ (Friend) ಭೀಕರವಾಗಿ ಕೊಲೆಗೈದು (Murder), ಶಿರಚ್ಛೇದ ಮಾಡಿ (Beheading), ದೇಹದ ಆಂತರಿಕ ಭಾಗಗಳನ್ನು ಕಿತ್ತು ಹಾಕಿ, ಕೊನೆಗೆ ಪೊಲೀಸರಿಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ. ವರದಿಗಳ ಪ್ರಕಾರ ಆರೋಪಿಯ ಗೆಳತಿ ಈ ಹಿಂದೆ ಆತನ ಸ್ನೇಹಿತನೊಂದಿಗೆ ಸಂಬಂಧ ಹೊಂದಿದ್ದಳು. ಆಕೆಗೆ ಸಂತ್ರಸ್ತ ಯುವಕ ಸಂದೇಶ ಕಳುಹಿಸುತ್ತಿದ್ದ. ಇದರಿಂದ ಕೋಪಗೊಂಡಿದ್ದ ಆರೋಪಿ, ಸ್ನೇಹಿತನ ಶಿರಚ್ಛೇದ ಮಾಡಿದ್ದಾನೆ. ಬಳಿಕ ಆತನ ಹೃದಯ, ಖಾಸಗಿ ಭಾಗಗಳನ್ನು ಕಿತ್ತಿದ್ದು, ಬೆರಳುಗಳನ್ನೂ ಕತ್ತರಿಸಿದ್ದಾನೆ ಎನ್ನಲಾಗಿದೆ. ಘಟನೆಯೇನು? ಆರೋಪಿ ಹರಿಹರ ಕೃಷ್ಣ ಹಾಗೂ ಕೊಲೆಯಾದ ಯುವಕ ನವೀನ್ ಗೆಳೆಯರಾಗಿದ್ದು, ಈ ಹಿಂದೆ ದಿಲ್‌ಸುಖ್‌ನಗರದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇಬ್ಬರೂ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ ನವೀನ್ ಮೊದಲು ತನ್ನ ಪ್ರೇಮವನ್ನು ಯುವತಿಗೆ ತಿಳಿಸಿದ್ದ. ಈ ಪ್ರಸ್ತಾಪವನ್ನು ಆಕೆ ಒಪ್ಪಿಕೊಂಡಿದ್ದು, 1-2 ವರ್ಷದ ಬಳಿ ಅವರಿಬ್ಬರೂ ಬೇರೆಯಾಗಿದ್ದರು. ಬಳಿಕ ಯುವತಿ ಹರಿಹರ ಕೃಷ್ಣನೊಂದಿಗೆ ಸಂಬಂಧ ಬೆಳೆಸಿದ್ದಳು.…