Author: Prajatv Kannada

ಬೆಳಗಾವಿ: ರಾಜಹಂಸಗಡ ಕೋಟೆ (Rajahamsagada) ಕದನ ಮುಂದುವರೆದಿದ್ದು ಸಿಎಂ ಉದ್ಘಾಟಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ (Chhatrapati Shree Shivaji Maharaj Statue) ನಾಳೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನೇತೃತ್ವದಲ್ಲಿ ಮತ್ತೊಮ್ಮೆ ಲೋಕಾರ್ಪಣೆಗೊಳ್ಳಲಿದೆ. ಲೋಕಾರ್ಪಣೆ ಸಂದರ್ಭದಲ್ಲಿ ಮಹಾರಾಷ್ಟ್ರದ (Maharashtra) ತುಳಜಾಪುರದಿಂದ ಆಗಮಿಸಿದ ಅರ್ಚಕರಿಂದ ಶಿವಾಜಿ ಪ್ರತಿಮೆಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಗುತ್ತದೆ. ಮಹಾರಾಜರ 13ನೇ ವಂಶಸ್ಥ ಯುವರಾಜ ಸಂಭಾಜಿರಾಜೇ ಛತ್ರಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಭಾನುವಾರ ಬೆಳಗ್ಗೆ 9ರಿಂದ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಪಾಲಕಿ ಉತ್ಸವ, ಧ್ವಜಾರೋಹಣ, ಉತ್ಸವಮೂರ್ತಿ ಪೂಜೆಯೊಂದಿಗೆ ಪ್ರತಿಮೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar), ಮಹಾರಾಷ್ಟ್ರದ ಮಾಜಿ ಗೃಹಸಚಿವ ಸತೇಜ್ ಪಾಟೀಲ್, ಮರಾಠಿ ನಟ ಹಾಗೂ ಸಂಸದ ಡಾ.ಅಮೋಲ್ ಕೋಲೆ, ಲಾತೂರು ಶಾಸಕ ಧೀರಜ್ ದೇಶಮುಖ್, ಖ್ಯಾತ ಚಿತ್ರನಟ ರಿತೇಶ್ ದೇಶಮುಖ್ ಸೇರಿ ಹಲವು ಗಣ್ಯರಿಗೆ ಆಹ್ವಾನ…

Read More

ಬೆಂಗಳೂರು: ಇಂದು ಸಿಲಿಕಾನ್ ಸಿಟಿಯಲ್ಲಿ ನಡೆಯಲಿರುವ ಸಿಸಿಎಲ್ (CCL) ಪಂದ್ಯಾವಳಿಯಲ್ಲಿ 2023ನೇ ಸಾಲಿನ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಪ್ರಯತ್ನಕ್ಕಾಗಿ ತೆಲುಗು ವಾರಿಯರ್ಸ್ (Telugu Warriors) ಮತ್ತು ಕರ್ನಾಟಕ ಬುಲ್ಡೋಜರ್ಸ್ (Karnataka Bulldozers) ಕ್ರಮವಾಗಿ ಪಂದ್ಯಗಳನ್ನು ಆಡಲಿವೆ. ಜೈಪುರದಿಂದ ಬೆಂಗಳೂರಿಗೆ ಆಗಮಿಸಿರುವ ತಂಡಗಳು ಬೆಂಗಳೂರಿನಲ್ಲಿ ಇಂದು ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ಒಟ್ಟು ನಾಲ್ಕು ಪಂದ್ಯಗಳು ನಡೆಯಲಿವೆ ರಾಯಪುರ ಮತ್ತು ಜೈಪುರದಲ್ಲಿ ಎರಡು ದಿನಗಳ ಕಾಲ ಸಿಸಿಎಲ್ ಪಂದ್ಯಗಳು ನಡೆದಿವೆ. ಕ್ರಿಕೆಟ್ ಅಭಿಮಾನಿಗಳನ್ನು ಮತ್ತು ಸಿನಿಮಾ ಪ್ರೇಕ್ಷಕರನ್ನು ಸೆಳೆದ ಈ ಪಂದ್ಯಗಳು ಅದೇ ರೋಚಕತೆಯನ್ನು ಬೆಂಗಳೂರಿನಲ್ಲಿ ಮುಂದುವರೆಸಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಾವಳಿಯು ಪಂಜಾಬ್ ಮತ್ತು ತೆಲುಗು ವಾರಿಯರ್ಸ್ ನಂತರ ಚೆನ್ನೈ ರೈನೋಸ್ (Chennai Rhinos) ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ಪಂದ್ಯಗಳು ಏರ್ಪಡಲಿವೆ. ಇಂದು ಮಧ್ಯಾಹ್ನ 2.30 ರಿಂದ ಸಂಜೆ 6.30ರವರೆಗೆ ಪಂಜಾಬ್ ಡಿ ಶೇರ್ (Punjab D Sher) ಮತ್ತು ತೆಲುಗು ವಾರಿಯರ್ಸ್ ನಡುವೆ ಪಂದ್ಯವಿದ್ದರೆ, ಸಂಜೆ 7 ಗಂಟೆಯಿಂದ ರಾತ್ರಿ…

Read More

ವಸಿಷ್ಠ ಸಿಂಹ ನಟನೆಯ ಬಹು ನಿರೀಕ್ಷಿತ ಚಿತ್ರ ‘ಲವ್ ಲಿ’ ಆರಂಭದಿಂದಲು ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಚೇತನ್ ಕೇಶವ್ ನಿರ್ದೇಶನದ ಲವ್ ಲಿ ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡಿದ್ದು, ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿದೆ. ಲಂಡನ್ ನಲ್ಲಿ ಸೆರೆ ಹಿಡಿಯುವ ಸಾಂಗ್ ವೊಂದನ್ನು ಹೊರತು ಪಡಿಸಿ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಲವ್ ಲಿ ಟೀಂ ಕಳೆದ ಏಳು ದಿನದಿಂದ ಡಬ್ಬಿಂಗ್ ನಲ್ಲಿ ತೊಡಗಿದೆ. ವಸಿಷ್ಠ ಸಿಂಹ, ಸ್ಟೆಫಿ ಪಟೇಲ್, ದತ್ತಣ್ಣ, ರಂಗಾಯಣ ರಘು, ಅಚ್ಯುತ್ ಕುಮಾರ್, ವಂಶಿಕಾ, ಸೂರಜ್ ಚಿತ್ರದ ಡಬ್ಬಿಂಗ್ ಪೋಷನ್ ಕಂಪ್ಲೀಟ್ ಮಾಡಿದ್ದಾರೆ. ಐದು ದಿನಗಳ ಡಬ್ಬಿಂಗ್ ಕೆಲಸ ಬಾಕಿ ಇದೆ ಎಂದು ನಿರ್ದೇಶಕ ಚೇತನ್ ಕೇಶವ್ ತಿಳಿಸಿದ್ದಾರೆ. ‘ಲವ್ ಲಿ’ ಚೇತನ್ ಕೇಶವ್ ನಿರ್ದೇಶನದ ಮೊದಲ ಸಿನಿಮಾ. ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ರೌಡಿಸಂ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ವಸಿಷ್ಠ…

Read More

ನವದೆಹಲಿ: ತನ್ನನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಿ, ತನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮುಂಬೈ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ವಿಷಯದಲ್ಲಿ ಅರ್ಜಿದಾರರಿಂದ ಯಾವುದೇ ಸೂಚನೆಗಳನ್ನು ಪಡೆಯುತ್ತಿಲ್ಲ ಎಂದು ಮಲ್ಯ ಪರ ವಕೀಲರು ತಿಳಿಸಿದ ನಂತರ ಸುಪ್ರೀಂ ಕೋರ್ಟ್, ಮುಂಬೈ ಕೋರ್ಟ್ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ವಿಜಯ್ ಮಲ್ಯ ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಮುಂಬೈ ಕೋರ್ಟ್‌ ಘೋಷಣೆ ಮಾಡಿದ್ದು, ಅದರ ಪ್ರಕ್ರಿಯೆಯ ಭಾಗವಾಗಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಿತ್ತು. ಆದರೆ, ತಮ್ಮನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿದ ಮುಂಬೈ ಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಮುಂಚೆ ಮಲ್ಯ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ(ಇಡಿ) ನೋಟಿಸ್ ಜಾರಿ ಮಾಡಿತ್ತು. ಆದರೆ ವಿಜಯ್ ಮಲ್ಯ ಆರ್ಥಿಕ ಅಪರಾಧಿ ಎಂದು ಘೋಷಿಸಿದ್ದ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಆದೇಶಕ್ಕೆ…

Read More

ಮಂಡ್ಯ: ಸದಾ ಸುದ್ದಿಯಲ್ಲೇ ಇರುವ ಕಾಂಗ್ರೆಸ್‍ನ (Congress) ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‍ನ ಸಹೋದರ ಕೆ.ಬಿ.ರವಿಕುಮಾರ್ ಇದೀಗ ಮಹಿಳೆಯ ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಕೆಆರ್ ಪೇಟೆಯ (K.R.Pete) ಮಹಿಳೆಯೊಂದಿಗೆ ಕೆ.ಬಿ.ರವಿ ಟವಲ್ ಹಾಗೂ ಬನಿಯನ್‍ನಲ್ಲಿ ಸಿಕ್ಕಿಬಿದ್ದು ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ನಗರದಲ್ಲಿರುವ ರವಿಯವರ ವಾಣಿಜ್ಯ ಕಟ್ಟಡದಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ (Beauty Parlour) ನಡೆಸುತ್ತಿದ್ದಳು. ಶುಕ್ರವಾರ ಮಹಿಳೆ ಮನೆಗೆ ಬಾರದ ಹಿನ್ನೆಲೆ ಗಂಡ ಹಾಗೂ ಆತನ ಮನೆಯವರು ರವಿಯವರ ಮನೆಯ ಬಳಿ ಬಂದು ನೋಡಿದಾಗ ಆಕೆಯ ಸ್ಕೂಟರ್ (Scooter) ಇರುವುದು ಪತ್ತೆಯಾಗಿದೆ. ಕುಟುಂಬ ಆಕೆಯನ್ನು ಕರೆದು ಕೇಳಿದಾಗ ನನಗೆ ನೀನು ಬೇಡ, ನಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ ಎಂದು ಗಂಡನಿಗೆ ಗದರಿಸಿದ್ದಾಳೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಮಾಡಾಳ್ ಕುಟುಂಬದಿಂದ ಖತರ್ನಾಕ್ ಪ್ಲಾನ್- ಲೋಕಾಯುಕ್ತ ಬರುತ್ತೆ ಅಂತ ಸಿಸಿಟಿವಿ ಆಫ್! ಮಹಿಳೆಯ ಕುಟುಂಬದಲ್ಲಿ ಅಕ್ರಮ ಸಂಬಂಧ ವಿಚಾರವಾಗಿ ನಿರಂತರ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಗಂಡ ಹಾಗೂ…

Read More

ಬೆಂಗಳೂರು: ಮಹಿಳಾ ದಿನಾಚರಣೆಯ ಕೊಡುಗೆಯಾಗಿ ಬಿಎಂಟಿಸಿ ಮಾರ್ಚ್ 8 ರಂದು ತನ್ನ ಬಸ್ ಗಳಲ್ಲಿ ಉಚಿತ ಪ್ರಯಾಣ ಘೋಷಿಸಿದೆ. ಮಾರ್ಚ್ 8 ರಂದು ನೀವು ನಗರದಾದ್ಯಂತ ಸಂಚರಿಸುವ ಬಿಎಂಟಿಸಿ ಬಸ್ ಗಳಲ್ಲಿ ನಿರ್ಭಯವಾಗಿ, ಸಂಪೂರ್ಣವಾಗಿ ಉಚಿತ ಸಂಚಾರ ನಡೆಸಬಹುದಾಗಿದೆ. ಎಷ್ಟು ಭಾರಿ ಯಾವ ಬಸ್ ನಲ್ಲಿ ಓಡಾಡಿದ್ರೂ ಹೆಣ್ಣು ಮಕ್ಕಳಿಂದ ಹಣ ಪಡೆಯದಿರಲು ಬಿಎಂಟಿಸಿ ನಿರ್ಧರಿಸಿದೆ. ಬಿಎಂಟಿಸಿ ಬಳಕೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲು ಹಾಗೂ ಜನರನ್ನು ಬಿಎಂಟಿಸಿಯತ್ತ ಸೆಳೆಯಲು ಬಿಎಂಟಿಸಿ ಈ ಪ್ರಯತ್ನ ಮಾಡಿದೆ. ಕೇವಲ ಮಹಿಳೆಯರಿಗೆ ಮಾತ್ರವಲ್ಲ ಈ ಹಿಂದೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ವೇಳೆಯೂ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಕೊರೋನಾ ಬಳಿಕ ಬಿಎಂಟಿಸಿ ಪ್ರಯಾಣಿಕರ ಕೊರತೆಯಿಂದಾಗಿ ನಷ್ಟ ಎದುರಿಸುತ್ತಿತ್ತು. ಆದರೆ ಈಗ ಜನಜೀವನ ಸಹಜಸ್ಥಿತಿಗೆ‌ ಮರಳುತ್ತಿದ್ದಂತೆ ಬಿಎಂಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆ ನಿಧಾನಕ್ಕೆ ಏರಿಕೆಯಾಗ ತೊಡಗಿದೆ. ಆದರೆ ಮಾರ್ಚ್ 8 ರಂದು  ಬಿಎಂಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣ ಘೋಷಿಸಿದೆ.

Read More

ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ, ಗೋಪಾಲ್‌ ಹಳ್ಳೂರ್‌, ಮಲ್ಲಿಕಾರ್ಜುನ್‌ ಅಸೋಡೆ, ಮೂವರು ಪೊಲೀಸ್‌ ಪೇದೆಗಳು ಸೇರಿದಂತೆ 16 ಆರೋಪಿಗಳು ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 17 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ವಿಜಯಪುರ(ಮಾ.01): ಜಿಲ್ಲೆಯ ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದಲ್ಲಿ ನಡೆದಿದ್ದ ಧರ್ಮರಾಜ್‌ ಚಡಚಣ ನಕಲಿ ಎನ್‌ಕೌಂಟರ್‌ ಹಾಗೂ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮಾತೀರದ ಮಹಾದೇವ ಬೈರಗೊಂಡ ಸೇರಿದಂತೆ ಎಲ್ಲ ಆರೋಪಿಗಳು ಸೋಮವಾರ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿ ವಿಚಾರಣೆ ಎದುರಿಸಿದರು. ಈ ವೇಳೆ ನ್ಯಾಯಾಲಯವು ಏ.10 ವಿಚಾರಣೆ ಮುಂದೂಡಿದೆ. ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ, ಗೋಪಾಲ್‌ ಹಳ್ಳೂರ್‌, ಮಲ್ಲಿಕಾರ್ಜುನ್‌ ಅಸೋಡೆ, ಮೂವರು ಪೊಲೀಸ್‌ ಪೇದೆಗಳು ಸೇರಿದಂತೆ 16 ಆರೋಪಿಗಳು ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 17 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 6ನೇ ಆರೋಪಿ ಬಾಬು ಕಚನಾಳರ್‌ ಊಫ್‌ರ್‍ ಮೆಂಬರ್‌ ಮಹಾದೇವ ಬೈರಗೊಂಡನ ಮೇಲೆ ನಡೆದ ಚಡಚಣ ಗ್ಯಾಂಗ್‌ ದಾಳಿ ಮಾಡಿದ ವೇಳೆ ಸಾವನ್ನಪ್ಪಿದ ಕಾರಣ…

Read More

ಮಾಲಾಧಾರಿಗಳು ಮಾ.18ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ಅವರ ಸಮಾಧಿ ದರ್ಶನ (ಪುಣ್ಯಭೂಮಿ) ಮಾಡಲಿದ್ದಾರೆ. ಅಪ್ಪು ಅವರ ಜನ್ಮದಿನವನ್ನು ಸರ್ಕಾರ ಸ್ಫೂರ್ತಿ ದಿನ ಎಂದು ಆಚರಿಸುತ್ತಿದೆ. ಹೊಸಪೇಟೆ(ಮಾ.02):  ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಅಭಿಮಾನಿಗಳು ನಗರದಲ್ಲಿ ಬುಧವಾರ ಅಪ್ಪು ದೇವರ ಮಾಲೆ ಧರಿಸಿ ವ್ರತಾಚರಣೆಗೆ ಚಾಲನೆ ನೀಡಿದರು. ಒಂಬತ್ತು ಜನ ಅಭಿಮಾನಿಗಳು ಪುನೀತ್‌ ಪ್ರತಿಮೆ ಬಳಿ ವಿಶೇಷ ಪೂಜೆ ಸಲ್ಲಿಸಿ ಮಾಲೆ ಧರಿಸಿದರು. ಅಪ್ಪು ದೇವರ ಮಾಲಾಧಾರಿಗಳು ಮಾ. 18ಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ಅವರ ಸಮಾಧಿ ದರ್ಶನ (ಪುಣ್ಯಭೂಮಿ) ಮಾಡಲಿದ್ದಾರೆ. ಅಪ್ಪು ಅವರ ಜನ್ಮದಿನವನ್ನು ಸರ್ಕಾರ ಸ್ಫೂರ್ತಿ ದಿನ ಎಂದು ಆಚರಿಸುತ್ತಿದೆ. ಈ ಹಿನ್ನೆಲೆ ವಿಜಯನಗರ ಜಿಲ್ಲೆಯ ಅಪ್ಪು ಅಭಿಮಾನಿಗಳು ಅಪ್ಪು ದೇವರ ಮಾಲಾಧಾರಣೆ ಮಾಡಿದರು. ಮಾ. 17ರಂದು ಪುನೀತ್‌ ಪುತ್ಥಳಿ ಬಳಿ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಮಾ. 18ರಂದು ಮಾಲಾಧಾರಿಗಳು ಪುನೀತ್‌ ಅವರ ಸಮಾಧಿ ದರ್ಶನ ಅಪ್ಪು ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ: ‘ಕರ್ನಾಟಕ ರತ್ನ’ನ ನೆನಪಿನಲ್ಲಿ…

Read More

ಬೆಂಗಳೂರು:  ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ತಲಾ10  ಕೋಟಿ ರೂ ಅನುದಾನ ಮಂಜೂರು ಮಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನ ವಿಧಾನ ಪರಿಷತ್ ಸದಸ್ಯ TA ಶರವಣ  ಅಭನಂದಿಸಿದ್ದಾರೆ. 2023 – 24ನೇ ಸಾಲಿನ ಆಯವ್ಯಯ ಅಧಿವೇಶನದಲ್ಲಿ ಬ್ರಾಹ್ಮಣ ಮತ್ತು ಆರ್ಯ ವೈಶ್ಯ ಸಮುದಾಯದವರಿಗೆ ಅನ್ಯಾಯವಾಗಿರುವ ಬಗ್ಗೆ ಸದನದಲ್ಲಿ ವಿಧಾನ ಪರಿಷತ್ ಸದಸ್ಯ TA ಶರವಣ ಪ್ರಸ್ತಾಪಿಸಿದ್ದರು. ಇದನ್ನು ಪರಿಶಿಲಿಸಿದ ಸಿ.ಎಂ ಬೊಮ್ಮಾಯಿ ಅವರು ಅನುದಾನದ ಮರು ಹೊಂದಾಣಿಕೆ ಮಾಡುವ ಮೂಲಕ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ತಲಾ.10 ಕೋಟಿ ರೂ ಅನುದಾನವನ್ನು ಇದೇ ಆರ್ಥಿಕ ವರ್ಷದಲ್ಲಿ ನೀಡುವುದಾಗಿ ಬರವಸೆ ನೀಡುವ ಮೂಲಕ ಸಕಾರಾತ್ಮಕವಾಗಿ ಸ್ಪಂದಿಸಿ  ಅನುದಾನ ಬಿಡುಗಡೆ ಮಾಡಿದ್ದಾರೆ.  ಇದಕ್ಕಾಗಿ ವಿಧಾನ ಪರಿಷತ್ ಸದಸ್ಯ TA ಶರವಣ  ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನ ಅಭಿನಂದಿಸಿದ್ದಾರೆ. ಹಾಗೂ ಸರ್ಕಾರವು ಸಮಾನ್ಯ…

Read More

ಬೆಂಗಳೂರು: ಪಿಯುಸಿ ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್​ ಧರಿಸಿ ಬರುವಂತಿಲ್ಲ ಎಂದು ಇಂದು ಮತ್ತೊಮ್ಮೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಮಾರ್ಚ್​ 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ. ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್​ಗೆ ನಿರ್ಬಂಧಿಸಲಾಗಿದ್ದು, ಹಿಜಾಬ್ ಧರಿಸಿ ಬರುವವರಿಗೆ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಹಿಜಾಬ್​ ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಪರೀಕ್ಷೆ ಸಮಯದಲ್ಲಿ ಹಿಜಾಬ್​ ಅನುಮತಿಸುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ಮುರಿದಂತೆ ನಿರ್ಧಾರ ಪ್ರಕಟಿಸಿದರು. ಇನ್ನೂ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ವಿವಿಧ ಜಿಲ್ಲೆಗಳಲ್ಲಿ ಕಾಲೇಜು ಪ್ರಾಂಶುಪಾಲರಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಮನವಿ ಮಾಡಿದ್ದರು. ಉಡುಪಿ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕಾಲೇಜುಗಳಲ್ಲಿ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿದ್ದರು ಎಂದು ಇಲಾಖೆಯಿಂದ ಮಾಹಿತಿ ತಿಳಿದು ಬಂದಿದೆ. ಆದ್ರೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪಿಯು…

Read More