Author: Prajatv Kannada

ಬೆಳಗಾವಿ: ಕಳೆದ ಎಲೆಕ್ಷನ್‍ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) 51 ಸಾವಿರ ಲೀಡ್‍ನಿಂದ ಗೆದ್ದಿದ್ದರು. ಈ ಜನಸಾಗರ ನೋಡಿದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಒಂದೂವರೆ ಲಕ್ಷ ಲೀಡ್‍ನಲ್ಲಿ ಬರಬಹುದು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದರು. ತಾಲೂಕಿನ ಪಂತ ಬಾಳೇಕುಂದ್ರಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದಿನ ಎಲೆಕ್ಷನ್‍ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ 51 ಸಾವಿರ ಲೀಡ್‍ನಿಂದ ಗೆದ್ದಿದ್ದರು. ಈ ಜನಸಾಗರ ನೋಡಿದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಒಂದೂವರೆ ಲಕ್ಷ ಲೀಡ್ ನಲ್ಲಿ ಬರಬಹುದು. ಕರ್ನಾಟಕದಲ್ಲಿ ನಿಮ್ಮ ಗೆಲುವು ಇತಿಹಾಸ ಮಾಡುತ್ತದೆ. ಈ ಕ್ಷೇತ್ರದ ಹೆಣ್ಣು ಮಕ್ಕಳು ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿದ್ದಾರೆ ಎಂದು ಕೇಳಿದ್ದೇವೆ. ಇಂದು ಅದು ಸಾಬೀತಾಗಿದೆ. ಪ್ರಜಾಧ್ವನಿ ಯಾತ್ರೆ ಎಲ್ಲಿ ಹೋದರೂ ಜನಸಾಗರ ಸೇರುತ್ತಿದೆ ಎಂದರು. ಇದೇ ವೇಳೆ ಸಿದ್ದರಾಮಯ್ಯ (Siddaramaiah) ಸರ್ಕಾರದ ಅವಧಿಯ ಯೋಜನೆಗಳ ಮಾಹಿತಿ ನೀಡುವ ವೇಳೆ ಜಮೀರ್ ಅಹ್ಮದ್ ಖಾನ್ ಎಡವಟ್ಟು ಮಾಡಿಕೊಂಡ ಘಟನೆ ಕೂಡ ನಡೆಯಿತು. ಕ್ಷೀರ ಭಾಗ್ಯ ಎನ್ನುವ ಬದಲು…

Read More

ಚಾಮರಾಜನಗರ: ಕೋಲಾರದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಗೆದ್ದರೆ ಅವರು ಹೇಳಿದಂತೆ ಕೇಳುತ್ತೇನೆ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗವಹಸಿ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಒಮ್ಮೆ ಕೋಲಾರದಿಂದ ಸ್ಪರ್ಧಿಸುತ್ತೇನೆ ಎನ್ನುತ್ತಾರೆ. ಮತ್ತೊಮ್ಮೆ ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎನ್ನುತ್ತಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವರಿಗೆ ಏನು ರೋಗ? ಕೋಲಾರ ಕ್ಷೇತ್ರದ ದಲಿತರು ಸಿದ್ದರಾಮಯ್ಯರನ್ನು ಸೋಲಿಸಲು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಕಪಾಳಕ್ಕೆ ಹೊಡೆದು ಸೋಲಿಸಲು ಕಾಯುತ್ತಿದ್ದಾರೆ. ಜಿ ಪರಮೇಶ್ವರ್, ಮುನಿಯಪ್ಪ ಅವರನ್ನು ಸೋಲಿಸಿದ್ದನ್ನು ದಲಿತರು ಮರೆತಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ಬೇಡ, ಕಾಂಗ್ರೆಸ್ಸಿಗರೇ ಸಾಕು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ಗೆ ಜನ ಉತ್ತರ ಕೊಡುವ ಕಾಲ ಬಂದಿದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿದ್ದರಾಮಯ್ಯ ನರಹಂತಕ ಎಂದು ಕರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್…

Read More

ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆ (Vidhanasabha Election) ಗೆ ದಿನಗಣನೇ ಆರಂಭವಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಅಕ್ಷರಶಃ ರಣಾಂಗಣವಾಗಿದೆ. ಹಾಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಫುಲ್ ಆ್ಯಕ್ಟೀವ್ ಆಗಿರುವ ರಮೇಶ್, ಮತ್ತೊಂದು ಸಮಾವೇಶ ನಡೆಸಿದರು. ಇದೇ ವೇಳೆ ಲಕ್ಷ್ಮಿ ವಿರುದ್ಧ ಗುಡುಗಿದ ರಮೇಶ್, ಸಮಾವೇಶ ನೆಪದಲ್ಲಿ ಬಾಡೂಟ ಹಾಕಿಸಿದರು. ಹೌದು. ಒಂದು ಕಾಲದಲ್ಲಿ ಆಪ್ತರಾಗಿದ್ದ ರಮೇಶ್ ಜಾರಕಿಹೊಳಿ (Ramesh Jarakiholi) ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಇಂದು ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಲಕ್ಷ್ಮಿ ಗೆಲುವಿಗೆ ಶ್ರಮಿಸಿದ್ದ ರಮೇಶ್, ಇಂದು ಅದೇ ಲಕ್ಷ್ಮಿ ಸೋಲಿಸಲು ಶಪಥ ಮಾಡಿದ್ದಾರೆ. ಕಳೆದ ಎರಡು ತಿಂಗಳಿಂದ ಲಕ್ಷ್ಮಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಆ್ಯಕ್ಟೀವ್ ಆಗಿರುವ ರಮೇಶ್ ಕೂಡ ಮತ್ತೊಂದು ಸಮಾವೇಶ ನಡೆಸಿ ಉಚಗಾಂವ ಕ್ಷೇತ್ರದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಗೆ ಬಾಡೂಟ ಹಾಕಿಸಿದ್ದಾರೆ. ಸಾವಿರಾರು ಜನರು ಬಾಡೂಟ ಸವಿಯಲು ಮುಗಿಬಿದ್ದಿದ್ರು. ರಮೇಶ್ ಜಾರಕಿಹೊಳಿ ಹಾಗೂ ಆಪ್ತ ನಾಗೇಶ್ ಮನ್ನೋಳಕರ್ ನೇತೃತ್ವದಲ್ಲಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು.…

Read More

ಬೆಂಗಳೂರು: ಎಲ್.ಪಿ.ಜಿ ಸಿಲಿಂಡರ್ (LPG Cylinder) ಬೆಲೆ ಪದೇ  ಪದೇ ಏರಿಕೆ ಆಗುತ್ತಿರುವ ಹಿನ್ನೆಲೆ ಹೋಟೆಲ್ ಮಾಲೀಕ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸುವುದರೊಂದಿಗೆ ಸದ್ಯಕ್ಕೆ ಹೋಟೆಲ್ ಫುಡ್ಗಳ ಬೆಲೆ ಜಾಸ್ತಿಯಾಗೋದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಕುರಿತಾಗಿ ಹೋಟೆಲ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ ರಾವ್ ಪ್ರತಿಕ್ರಿಯೆ ನೀಡಿದ್ದು, ಜನ ಸಾಮಾನ್ಯರಿಗೆ ಹಾಗೂ ಹೋಟೆಲ್ ಮಾಲೀಕರಿಗೂ ಈಗೀನದರ ಸಿಕ್ಕಾಪಟ್ಟೆ ಹೊರೆಯಾಗಲಿದೆ. ಈ ಕುರಿತಾಗಿ ಇದೇ 16ಕ್ಕೆ ಕೇಂದ್ರ ಸಚಿವರನ್ನ ಭೇಟಿ ಮಾಡುತ್ತೇವೆ. ಜಿಎಸ್ಟಿ ರೇಟ್ ನಮಗೆ ತುಂಬ ಜಾಸ್ತಿ ಇದೆ. ಡೊಮೆಸ್ಟಿಕ್ ರೇಟ್ನಲ್ಲಿ 5% ಜಿಎಸ್ಟಿ ಇದೆ. ಆದರೆ ನಮಗೆ ಕಮರ್ಷಿಯಲ್ ರೇಟ್ನಲ್ಲಿ ಜಿಎಸ್ಟಿ 18% ಇದೆ. ಈ ವಿಚಾರವಾಗಿ ನಾವು ಈ ಹಿಂದೆ ಮನವಿ ಮಾಡಿದ್ದೇವು. ಈಗ ಮತ್ತೆ ಒತ್ತಾಯ ಮಾಡುತ್ತೇವೆ. ಜೊತೆಗೆ ನಮಗೆ ರಿಯಾಯಿತಿ ದರವು ಜಾಸ್ತಿ ಮಾಡಿದ್ದಾರೆ. ಕೇಂದ್ರ ಸಚಿವರ ಜೊತೆ ಮಾತಾನಾಡಿದ ಬಳಿಕ ಬೆಲೆ ಏರಿಕೆಯ ಕುರಿತು ನಿರ್ಧಾರ ಮಾಡುತ್ತೇವೆ ಗೃಹ ಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ 50…

Read More

ಆತ ಉದ್ಯಮಿ.. ಆರ್ಥಿಕವಾಗಿ ಸದೃಢನಾಗಿದ್ದ ಆತನಿಗೆ ವಿದ್ಯಾವಂತ ಮಗಳು.. ಎಂಬಿಬಿಎಸ್ ಮುಕ್ತಾಯದ ಹಂತದಲ್ಲಿದ್ದ ಮಗಳಿಗೆ ತನ್ನದೇ ಆದ ಆಸ್ಪತ್ರೆ ತೆರೆಯೋ ಕನಸು ಕಂಡಿದ್ದ.. ಹೀಗೆ ಉದ್ಯಮ, ಆಸ್ಪತ್ರೆಯಂತ ಕನಸು ಕಂಡಿದ್ದ ಆತ ನೆನ್ನೆ ಜಿಮ್ ಗೆ ತೆರಳಿದವನು ನಾಪತ್ತೆಯಾಗಿದ್ದ.‌. ಇಡಿ ಕುಟುಂಬ ಆತನ ಹುಡುಕಾಟದಲ್ಲಿದ್ರೆ, ಇತ್ತ ಆಸ್ಪತ್ರೆ ಕಟ್ಟೊ ತಯಾರಿಯಲ್ಲಿದ್ದ ತನ್ನದೇ ಕಟ್ಟಡದಲ್ಲಿ ಆತ ಕೊಲೆಯಾಗಿದ್ದ.. ಈ ಫೋಟೊದಲ್ಲಿರುವ ಈತನ ಹೆಸರು ಲಿಯಾಖತ್.. ವಯಸ್ಸು 44.. ಜಿಮ್ ವರ್ಕೌಟ್ ಅಂತ ಫಿಟ್ ಆಗಿದ್ದ ಈತ ಒಳ್ಳೆ ಉದ್ಯಮಿ.. ಜಾಹಿರಾತು ಪ್ರಿಂಟಿಂಗ್ ಏಜೆನ್ಸಿ ಸೇರಿದಂತೆ ಎರಡು ಉದ್ಯಮ ಹೊಂದಿದ್ದ ಈತ ಆರ್ಥಿಕವಾಗಿ ಸದೃಢವಾಗಿದ್ದ.. ಪ್ರತಿದಿನ ಸಂಜೆ ಆದ್ರೆ ಸಾಕು ಜಿಮ್ ಗೆ ತೆರಳುತಿದ್ದ ಆತ ನೆನ್ನೆ ಜಿಮ್ ಗೆಂದು ಹೋದವನು ತಡರಾತ್ರಿಯಾದ್ರೂ ಮನೆಗೆ ಬಂದಿರಲಿಲ್ಲ.. ಕಾಲ್ ಮಾಡಿದ್ರೆ ಫೋನ್ ರಿಂಗ್ ಆದ್ರೂ ಪಿಕ್ ಮಾಡುತ್ತಿರಲಿಲ್ಲ.. ಅನುಮಾನಗೊಂಡು ಹುಡುಕಾಟ ನಡೆಸಿದ ಕುಟುಂಬಸ್ಥರಿಗೆ ತನ್ನದೇ ಮತ್ತೋಂದು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.. ಅದು ಬರ್ಬರವಾಗಿ ಕೊಲೆಯಾಗಿದ್ದ.. ಹೌದು,…

Read More

ಆತ ಪ್ರೀತಿಸಿದವಳು  ದೂರ ಮಾಡಿದ್ಲು ಅಂತ  ನಡುರಸ್ತೆಯಲ್ಲೇ ಪ್ರೇಯಸಿಯ ರಕ್ತ ಹರಿಸಿದ್ದ. ಬರೋಬ್ಬರಿ 16 ಬಾರಿ ಭೀಕರವಾಗಿ ಚಾಕುವಿನಿಂದ ಇರಿದು ಕೊಲೆಗೈದಿದ್ದ. ಪ್ರೀತಿ ಪ್ರೇಮ ಅಂತ ಸುತ್ತಿದ್ದ ಜೋಡಿಗೆ ಜಾತಿ ಅಡ್ಡ ಬಂದಿತ್ತು. ಸಹಿಸದ ಪಾಗಲ್ ಪ್ರೇಮಿ ತನ್ನ ಹುಡುಗಿಯ ಕತ್ತು ಸೀಳಿದ್ದ.. ತಾನೇ ಕೊಲೆಗೈದ ಪ್ರೇಯಸಿಯ ಶವದ ಮುಂದೆ ಬಿಕ್ಕಿ ಬಿಕ್ಕಿ ಅಳ್ತಿರೋ ಈ ಪಾಗಲ್ ಪ್ರೇಮಿಯ ಹೆಸರು ದಿನಕರ ಬನಾಲಾ. ಆಂದ್ರಪ್ರದೇಶದ ಶ್ರೀಕಾಕುಲಂ ನ ನಿವಾಸಿಯಾಗಿರೋ ದಿನಕರ ಇದೇ ಲೀಲಾ ಪವಿತ್ರ ಎಂಬಾಕೆಯನ್ನ ಕಳೆದ ಐದು ವರ್ಷದಿಂದ ಪ್ರೀತಿಸ್ತಿದ್ದ. ನಿನ್ನೆ ಬೆಂಗಳೂರಿನ ಮುರುಗೇಶ್ ಪಾಳ್ಯದಲ್ಲಿ ಪ್ರೇಯಸಿ ಲೀಲಾಳನ್ನ 16 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆಗೈದಿದ್ದ. ತನ್ನ ಜೀವದ ಜೀವ ಲೀಲಾಳನ್ನ ಕೊಂದ್ನಲ್ಲಾ ಅನ್ನೋ ಫೀಲಿಂಗ್ ನಲ್ಲೇ ಪ್ರೇಯಸಿಯ ಶವದ ಮುಂದೆಯೇ ಬಿಕ್ಕಿಬಿಕ್ಕಿ ಅಳ್ತಾ ಕೂತಿದ್ದ. ಸ್ಥಳಕ್ಕೆ ಬಂದ ಜೀವನ್ ಭೀಮಾನಗರ ಪೊಲೀಸ್ರು ಪ್ರೀತಿಯ ಕೊಲೆಗಾರನನ್ನು ಬಂಧಿಸಿ ವಿಚಾರಣೆ ಶುರುಹಚ್ಚಿಕೊಂಡಿದ್ರು. ಆರೋಪಿ ದಿನಕರ ಹಾಗೂ ಲೀಲಾ ಆಂದ್ರಪ್ರದೇಶ…

Read More

ಉತ್ಸಾಹಿ ಯುವಕರ ತಂಡದಿಂದ ಮೂಡಿಬಂದಿರುವ ‘ಕಡಲತೀರದ ಭಾರ್ಗವ’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿವೆ. ಈಗ ಚಿತ್ರವು ಇದೇ ಮಾರ್ಚ್ 03ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘ಕಡಲತೀರದ ಭಾರ್ಗವ’ ಎಂದರೆ ಮೊದಲಿಗೆ ನೆನಪಿಗೆ ಬರುವುದು ಡಾ. ಶಿವರಾಮ ಕಾರಂತರು. ಕನ್ನಡ ನಾಡಿನಲ್ಲಿ ಅವರು ‘ಕಡಲತೀರದ ಭಾರ್ಗವ’ ಎಂಬ ಬಿರುದಿನಿಂದಲೇ ಅವರು ಪ್ರಸಿದ್ಧರಾದವರು. ಆದರೆ, ಅವರಿಗೂ, ಈ ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ, ಇದು ಅವರ ಜೀವನದ ಕಥೆಯಲ್ಲ ಎನ್ನುತ್ತಾರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿರುವ ಪನ್ನಗ ಸೋಮಶೇಖರ್. ಈ ಕುರಿತು ಮಾತನಾಡುವ ಅವರು, ‘ಕಡಲು ಎಂದರೆ ಅಂತ್ಯವಿಲ್ಲದ್ದು ಅಥವಾ ಅನಂತ ಎಂದರ್ಥ. ಆ ಕಡಲನ್ನು ನಮ್ಮ ಚಿತ್ರದಲ್ಲಿ ಒಂದು ವಿಷಯಕ್ಕೆ ಹೋಲಿಸಿದ್ದೇನೆ. ಇನ್ನು, ಭಾರ್ಗವರಾಮ ಅಥವಾ ಪರಶುರಾಮ ಎನ್ನುವುದು ನಮ್ಮ ಪುರಾಣಗಳಲ್ಲಿ ಬರುವ ಒಂದು ಪವರ್ಫುಲ್ ಪಾತ್ರ. ಇಲ್ಲಿ ನಾಯಕ ಭಾರ್ಗವ, ಪರಶುರಾಮನ ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಏನೇ ಆದರೂ ಗುರಿ ಸಾಧಿಸುತ್ತೇನೆ ಎಂಬ ಛಲದಿಂದ…

Read More

ಸ್ಯಾಂಡಲ್‌ವುಡ್‌ ಸ್ಟಾರ್ ನಿರ್ದೇಶಕ ಎ.ಹರ್ಷ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಇತ್ತೀಚೆಗೆ ಹರ್ಷ ನಿರ್ದೇಶನದ `ವೇದ’ ಚಿತ್ರದ ಸೂಪರ್ ಸಕ್ಸಸ್ ನಂತರ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಸೀತಾರಾಮ ಕಲ್ಯಾಣ, ಭಜರಂಗಿ, ಭಜರಂಗಿ 2, ವೇದ, ಹೀಗೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಿಗೆ ಎ.ಹರ್ಷ ನಿರ್ದೇಶನ ಮಾಡಿದ್ದಾರೆ. ಇತ್ತೀಚಿನ ಶಿವಣ್ಣ ನಟನೆಯ `ವೇದ’ ಚಿತ್ರ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ರಿಲೀಸ್ ಆಗಿ ಕಮಾಲ್ ಮಾಡಿತ್ತು. ಭರ್ಜರಿ ಕಲೆಕ್ಷನ್ ಮಾಡುವ ಪರಭಾಷೆಯಲ್ಲೂ ವೇದ ಮಿಂಚಿತ್ತು. ಹೀಗಿರುವಾಗ ಪ್ರಶಾಂತ್ ನೀಲ್ ಅವರಂತೆಯೇ ತೆಲುಗು ಚಿತ್ರರಂಗದಲ್ಲಿ ಮಿಂಚಲು ಡೈರೆಕ್ಟರ್ ಹರ್ಷ ರೆಡಿಯಾಗಿದ್ದಾರೆ. ತೆಲುಗಿನ ಮಾಸ್ ಹೀರೋ ಗೋಪಿಚಂದ್‌ಗೆ ಹರ್ಷ ನಿರ್ದೇಶನ ಮಾಡ್ತಿದ್ದಾರೆ. `ವೇದ’ ಚಿತ್ರದ ಸಕ್ಸಸ್ ರೆಸ್ಪಾನ್ಸ್ ನೋಡಿ ನಟ ಗೋಪಿಚಂದ್ ಕೂಡ ಕಥೆ ಕೇಳಿ, ಎ. ಹರ್ಷ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಾಧ ಮೋಹನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

Read More

ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ `ಆಚಾರ್ಯ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಸಾಕಷ್ಟು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣವಾದ ಆಚಾರ್ಯ ಸಿನಿಮಾಗಾಗಿ 20 ಕೋಟಿ ವೆಚ್ಚದ ಸೆಟ್‌ನ್ನ ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ಈ ಸೆಟ್ ಬೆಂಕಿಗಾಹುತಿ ಆಗಿದೆ. ಕೊರಟಾಲ ಶಿವ ನಿರ್ದೇಶನದ `ಆಚಾರ್ಯ’ ಚಿತ್ರದಲ್ಲಿ ಚಿರಂಜೀವಿ, ರಾಮ್ ಚರಣ್ ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದರು. ಚಿರಂಜೀವಿ ಅವರ ಖಾಸಗಿ ಜಾಗದಲ್ಲಿ 20 ಕೋಟಿ ರೂಪಾಯಿ ವೆಚ್ಚದ ದೇವಸ್ಥಾನದ ಪಟ್ಟಣದ ಅದ್ದೂರಿ ಸೆಟ್ ಕೂಡ ನಿರ್ಮಾಣ ಮಾಡಲಾಗಿತ್ತು. 20 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದೀಗ ಈ ಸೆಟ್‌ಗೆ ಬೆಂಕಿ ಬಿದ್ದಿದೆ. ಮುಂದೆ ತಮ್ಮ ಸಿನಿಮಾ ನಂತರ ಬೇರೆ ಚಿತ್ರದ ಶೂಟಿಂಗ್‌ಗೂ ಕೊಡಬಹುದು ಎಂಬ ಕಾರಣಕ್ಕೆ ಈ ಸೆಟ್‌ನ್ನ ಹಾಗೆಯೇ ಇರಿಸಲಾಗಿತ್ತು. ಕೆಲವರು ಈ ಜಾಗದಲ್ಲಿ ಸಿಗರೇಟ್ ಸೇದಿದ್ದು, ಅವರು ಎದ್ದು ಹೋದ ಮೇಲೆ ಸೆಟ್‌ಗೆ ಬೆಂಕಿ ತಗುಲಿದೆ ಎನ್ನಲಾಗುತ್ತಿದೆ. ತಕ್ಷಣ ಅಗ್ನಿಶಾಮಕ…

Read More

ಜಿನೇವಾ: ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾಸಭೆಯಲ್ಲಿ ಸ್ವಘೋಷಿತ ದೇವಮಾನವ ಹಾಗೂ ಕೈಲಾಸ ದೇಶದ ಸಂಸ್ಥಾಪಕ ಸ್ವಾಮಿ ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿ ಭಾಗವಹಿಸಿದ್ದರು ಎನ್ನಲಾಗಿದೆ. ಇತ್ತಿಚೆಗೆ ವಿಶ್ವಸಂಸ್ಥೆ ವತಿಯಿಂದ ಜಿನೇವಾದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಮಹಾಸಭೆ ನಡೆದಿದ್ದು, ಈ ಸಭೆಯಲ್ಲಿ ಅಮೆರಿಕ, ಯುಕೆ, ಸ್ಲೊವೇನಿಯಾ, ಫ್ರಾನ್ಸ್ ಮುಂತಾದ ಕಡೆಗಳಲ್ಲಿ ನಿತ್ಯಾನಂದ ಆಶ್ರಮಗಳನ್ನು ನಡೆಸುತ್ತಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸ್ವಘೋಷಿತ ದೇವಮಾನವ, ಕಾಲ್ಪನಿಕ ʼಕೈಲಾಸʼ ರಾಷ್ಟ್ರದ ಸೂತ್ರಧಾರಿ, ಅತ್ಯಾಚಾರ ಆರೋಪಿ ಸ್ವಾಮಿ ನಿತ್ಯಾನಂದನ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆ ಸಭೆಯೊಂದರಲ್ಲಿ ತನ್ನ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ನಿತ್ಯಾನಂದ ತನ್ನ ದ್ವೀಪವನ್ನು ʼಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸʼ ಎಂದು ಕರೆದುಕೊಂಡಿದ್ದಾನೆ. ಈ ದ್ವೀಪಕ್ಕೆ ವಿಶ್ವಸಂಸ್ಥೆ ರಾಷ್ಟ್ರದ ಸ್ಥಾನಮಾನ ನೀಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈತನ ದ್ವೀಪ ಎಲ್ಲಿದೆ ಎಂಬುದೂ ಖಚಿತವಾಗಿಲ್ಲ. ಅತ್ಯಾಚಾರ ಆರೋಪ ಹೊತ್ತು ಭಾರತ ಬಿಟ್ಟು ಪರಾರಿಯಾಗಿರುವ ನಿತ್ಯಾನಂದನ ಕಾಲ್ಪನಿಕ ದೇಶ…

Read More