ಪ್ರಮುಖ ಸಭೆಗಾಗಿ ಭಾಗಿಯಾಗಲು ಅಮೆರಿಕದ ಉನ್ನತ ಭಯೋತ್ಪಾದನಾ ನಿಗ್ರಹ ಅಧಿಕಾರಿ ದೆಹಲಿಗೆ ಭೇಟಿ

ವಾಷಿಂಗ್ಟನ್‌: ಅಮೆರಿಕದ ಭಯೋತ್ಪಾದನಾ ನಿಗ್ರಹದ ಉನ್ನತ ಅಧಿಕಾರಿ ತಿಮೋತಿ ಬೆಟ್ಸ್ ಅವರು ಅಮೆರಿಕ-ಭಾರತದ ಭಯೋತ್ಪಾದನಾ ನಿಗ್ರಹದ ಜಂಟಿ ಕಾರ್ಯಾಚರಣೆಯ ವಾರ್ಷಿಕ ಸಭೆಗೆ ಹಾಜರಾಗಲು ಡಿಸೆಂಬರ್‌12ರಂದು ದೆಹಲಿಗೆ ಆಗಮಿಸಲಿದ್ದಾರೆ. ವಾರ್ಷಿಕ ಸಭೆಯಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ಭಯೋತ್ಪಾದನಾ ಬೆದರಿಕೆ, ಜಾರಿಗೊಳಿಸಬೇಕಿರುವ ಕಾನೂನು, ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಭಯೋತ್ಪಾದನಾ ನಿಗ್ರಹದ ಕ್ರಮ ಹಾಗೂ ನ್ಯಾಯಾಂಗವನ್ನು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ. ಬೆಟ್ಸ್‌ ಅವರು ಮೊದಲು ಜಪಾನ್‌, ಫಿಲಿಪ್ಪೀನ್ಸ್‌ಗೆ ಭೇಟಿ ನೀಡಿ ನಂತರ ಭಾರತಕ್ಕೆ ಆಗಮಿಸಲಿದ್ದಾರೆ. ಡಿಸೆಂಬರ್ 8ಕ್ಕೆ ಆರಂಭವಾಗುವ ಇವರ […]

Continue Reading

ಬೆಂಗಳೂರಿನಲ್ಲಿ ಪುಡಿರೌಡಿಗಳ ಹಾವಳಿ: ಬೇಕರಿ ಹುಡುಗರ ಜೊತೆ ತಗಾದೆ ತೆಗೆದು ಪುಂಡಾಟಿಕೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿರೌಡಿಗಳ ಹಾವಳಿ ಹೆಚ್ಚಾಗಿದೆ. ರೌಡಿಗಳ ಅಟ್ಟಹಾಸಕ್ಕೆ ಎಲ್ಲೆಯೇ ಇಲ್ಲದಂತಾಗಿದೆ. ನಿನ್ನೆ ರಾತ್ರಿ ನಾಲ್ಕು ಜನರ ರೌಡಿಗಳ ಗುಂಪು ಬೆಂಗಳೂರಿನ ಕುಂದಲಹಳ್ಳಿ ಗೇಟ್ ಬಳಿಯಿರುವ ಬ್ರಹ್ಮಲಿಂಗೇಶ್ವರ ಬೇಕರಿಗೆ ಸಿಗರೇಟ್ ಸೇದಲು ಹೋಗಿದ್ದಾರೆ. ಬೇಕರಿಯವರು ಸಿಗರೇಟ್ ನೀಡಿ ಹಣ ಕೇಳಿದ್ದಾರೆ. ಹಣ ಕೇಳಿದ್ದಕ್ಕೆ ಬೇಕರಿ ಹುಡುಗರಿಗೆ ರೌಡಿಗಳು ಅವ್ಯಾಚ್ಯ ಶಬ್ಧಗಳಿಂದ ನಿಂದಿಸುತ್ತಾ, ಮನಸೋ ಇಚ್ಚೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಹಲ್ಲೆಗೊಳಗಾದವರು ಹೆಚ್​ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನೂ ಪೊಲೀಸರು ಹಿಂತ ಪುಡಿ ರೌಡಿಗಳ ಹೆಡೆಮುರಿ […]

Continue Reading

ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ: ಕಾರ್ಯಕ್ರಮಕ್ಕೆ ತೆರಳಲಿರುವ ಬೊಮ್ಮಾಯಿ

ಬೆಂಗಳೂರು: ಡಿಸೆಂಬರ್ 12 ರಂದು ಗುಜರಾತ್ ರಾಜ್ಯದ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನೂ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಲು ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಸೋಮವಾರ ಬೆಂಗಳೂರಿನಿಂದ ಗುಜರಾತ್‌ಗೆ  ಪ್ರಯಾಣ ಬೆಳೆಸಲಿದ್ದು, ಪ್ರಮಾಣವಚನ  ಮುಗಿಸಿ ಅಂದೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಇನ್ನೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಈ ಗೆಲುವು 2023ರ ವಿಧಾನಸಭೆ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಪಕ್ಷದ ನಾಯಕರಿಗೆ ದೊಡ್ಡ ಉತ್ತೇಜನ ನೀಡಿದಂತಾ […]

Continue Reading

ಮುಂದುವರೆದ ಪೋಸ್ಟರ್ ಅಭಿಯಾನ: 10 ಸಾವಿರ ಕೋಟಿ ಅನುದಾನ ತೋರಿಸುವಂತೆ ಸವಾಲ್

ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇಂದು ಕೂಡ ಪೋಸ್ಟರ್ ಅಭಿಯಾನ ಮುಂದುವರಿದಿದೆ. ಬೆಂಗಳೂರಿನ ಆರ್ ಆರ್ ನಗರ ದಲ್ಲಿ ಸಚಿವ ಮುನಿರತ್ನ ವಿರುದ್ಧ ಪೋಸ್ಟರ್ ಅಭಿಯಾನ ನಡೆದಿದೆ. 10 ಸಾವಿರ ಕೋಟಿ ಅನುದಾನ ತೋರಿಸುವಂತೆ ಪೋಸ್ರ್ ನಲ್ಲಿ ಸವಾಲು ಹಾಕಲಾಗಿದೆ.10ಸಾವಿರ ಕೋಟಿ ಕಾಮಗಾರಿ ತೋರಿಸುವಂತೆ ಒತ್ತಾಯಿಸಲಾಗಿದೆ. ಕಾಮಗಾರಿ ತೋರಿಸಿದರೆ ಉಡುಗೊರೆ ನೀಡುವ ಆಮಿಷ ಒಡ್ಡಲಾಗಿದೆ. ಕ್ಷೇತ್ರದ ಗಲ್ಲಿಗಲ್ಲಿಗಳಲ್ಲಿ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ನಿನ್ನೆಯೂ ಶಾಸಕರ ಕಚೇರಿ, ವಿವಿಧೆಡೆ ಪೋಸ್ಟರ್ ಅಂಟಿಸಲಾಗಿತ್ತು. ಸಚಿವರ ಬೆಂಬಲಿಗರು ಪೋಸ್ಟರ್ ಗಳನ್ನು ತೆರವು […]

Continue Reading

ಗಾಂಧಿನಗರದಲ್ಲಿನ ಬ್ಯಾಂಕ್ ಆಫ್ ಮಹಾರಾಷ್ಟ್ರಕ್ಕೆ ಮುತ್ತಿಗೆ ಹಾಕಲು ಯತ್ನ

ಬೆಂಗಳೂರು: ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಶುಕ್ರವಾರ ಬೆಂಗಳೂರಿನ ಗಾಂಧಿನಗರದಲ್ಲಿನ ಬ್ಯಾಂಕ್ ಆಫ್ ಮಹಾರಾಷ್ಟ್ರಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಮೆಜೆಸ್ಟಿಕ್ ಬಳಿಯ ಗಾಂಧಿ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್ ಕಚೇರಿಗೆ ಮುತ್ತಿಗೆ, ಹಾಕಲು ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದರು. ಕೂಡಲೇ ರಾಜ್ಯ ಸರ್ಕಾರ ಎಂಇಎಸ್ ಮತ್ತು ಶಿವಸೇನಾ ಪುಂಡರಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಮಹಾರಾಷ್ಟ್ರ […]

Continue Reading

ಕಿರುತೆರೆಯಿಂದ ಅನಿರುದ್ದ್ ಬ್ಯಾನ್ ವಿಚಾರ: ಫಿಲ್ಮ್ ಚೇಂಬರ್ ಗೆ ಆಗಮಿಸಿದ ನಟ ಅನಿರುದ್ದ್

ಬೆಂಗಳೂರು: ನಟ ಅನಿರುದ್ಧ ಅವರನ್ನ ಕನ್ನಡ ಕಿರುತೆರೆಯಿಂದ ಬ್ಯಾನ್ ಮಾಡಿರುವ ವಿಚಾರ ಹೊಸ ಟ್ವಿಸ್ಟ್ ಪಡೆದುಕೊಂಡಿದ್ದು, ಇಂದು ಮಧ್ಯಾಹ್ನ ಫಿಲ್ಡ್ ಛೇಂಬರ್‌ನಲ್ಲಿ ಮಹತ್ವದ ಸಭೆ ನಡೆದಿದೆ. ಫಿಲ್ಡ್ ಛೇಂಬರ್ ಅಧ್ಯಕ್ಷ ಭಾಮ ಹರೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಟ ಅನಿರುದ್ಧ ಹಾಗೂ ಕಿರುತೆರೆ ನಿರ್ಮಾಪಕ ಸಂಘ ಭಾಗಿಯಾಗಿ, ಚರ್ಚೆ ನಡೆಸಿದ್ದಾರೆ. ಹಿರಿಯ ನಿರ್ದೇಶಕ ಎಸ್.ನಾರಾಯಣ್ ಅವರ ‘ಸೂರ್ಯವಂಶ’ ಧಾರಾವಾಹಿಯಲ್ಲಿ ಅನಿರುದ್ಧ ನಟಿಸುತ್ತಿದ್ದು, ಈ ಬಗ್ಗೆ ಖುದ್ದು ಅನಿರುದ್ಧ ಅವರೇ ಘೋಷಣೆ ಮಾಡಿಕೊಂಡಿದ್ದಾರೆ. ಅನಿರುದ್ಧ ಜೊತೆ ಧಾರಾವಾಹಿ ಮಾಡಲು ಮುಂದಾಗಿರುವ […]

Continue Reading

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮಳೆಯ ನಡುವೆಯೇ ವಿಪರೀತ ಚಳಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ನಡುವೆಯೇ ಚಳಿ ವಿಪರೀತ ಇರಲಿದೆ. ಈಗಾಗಲೇ ಸಿಲಿಕಾನ್‌ ಸಿಟಿ ಮಂದಿ ಚಳಿಯಿಂದ ತತ್ತರಿಸಿ ಹೋಗಿದ್ದಾರೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮದಿಂದ ಬೆಂಗಳೂರಿನಲ್ಲಿ ಸಾಧರಣ ಮಳೆಯಾಗುವ ಸಾಧ್ಯತೆ ಇದ್ದು, ಇದರ ನಡುವೆಯೇ ಚಳಿಯ ಪ್ರಮಾಣ ಹೆಚ್ಚಾಗಲಿದೆ. 5 ದಿನ ಚಳಿಯೊಂದಿಗೆ ಮೋಡ ಕವಿದ ವಾತಾವರಣವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಮಾಂಡಸ್ ಚಂಡಮಾರುತ ಕರ್ನಾಟಕ ಮೂಲಕ ಅರಬ್ಬೀ ಸಮುದ್ರದ ಕಡೆ ಹೋಗಲಿದೆ. ಈ ಚಂಡಮಾರುತದ ಎಫೆಕ್ಟ್ ದಕ್ಷಿಣ ಜಿಲ್ಲೆಗಳಿಗೆ ಉಂಟಾಗಲಿದೆ. ಇಂದು […]

Continue Reading

ಬೆಂಗಳೂರಿನ 44 ಸಂಚಾರಿ ಠಾಣೆ ಗಳಲ್ಲಿ ನಾಳೆ ನಾಗರಿಕ ಸಂಚಾರ ವೇದಿಕೆ ಸಭೆ

ಬೆಂಗಳೂರು: ಬೆಂಗಳೂರು ಸಂಚಾರ ಪೊಲೀಸ್ ವಿಭಾಗವು ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹಾಗೂ ಬಾಂಧವ್ಯಗಳನ್ನು ಸಾಧಿಸುವ ನಿಟ್ಟಿನಲ್ಲಿ ನಾಗರಿಕ ಸಂಚಾರ ವೇದಿಕೆ ಸಭೆಯನ್ನು ನಾಳೆ ಹಮ್ಮಿಕೊಳ್ಳಲಾಗಿದೆ. ನಾಳೆ ಬೆಳಗ್ಗೆ 11.30ರಿಂದ 1.30 ಗಂಟೆಯವರೆಗೆ ನಗರದ ಎಲ್ಲಾ 44 ಸಂಚಾರ ಪೊಲೀಸ್ ಠಾಣೆಗಳಲ್ಲಿ ಸಭೆ ನಡೆಸಲಾಗುತ್ತದೆ. ನಗರದ ರಸ್ತೆಗಳಲ್ಲಿ ಸುಗಮ ಸಂಚಾರವನ್ನು ಜಾರಿಗೊಳಿಸಲು ಹಾಗೂ ಅಪಘಾತಗಳನ್ನು ಸಮರ್ಥವಾಗಿ ತಡೆಗಟ್ಟಲು ಸಾರ್ವಜನಿಕರ ಸಹಕಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ನಾಗರಿಕ ಸಂಚಾರ ವೇದಿಕೆ ಸಭೆಯಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ […]

Continue Reading

ಗುಜರಾತ್‌ ನಲ್ಲಿ ಮಾತ್ರ ಮೋದಿ ಪ್ರಭಾವವೆಂದು ಫಲಿತಾಂಶದಿಂದ ಸಾಬೀತು: ಪೃಥ್ವಿ ರೆಡ್ಡಿ

ಕೇವಲ ಹತ್ತು ವರ್ಷಗಳಲ್ಲಿ ಆಮ್‌ ಆದ್ಮಿ ಪಾರ್ಟಿಯು ದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಕರ್ನಾಟಕ ಜನತೆ ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು. ಆಮ್‌ ಆದ್ಮಿ ಪಾರ್ಟಿಗೆ ರಾಷ್ಟ್ರೀಯ ಸ್ಥಾನಮಾನ ಸಿಗುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೃಥ್ವಿ ರೆಡ್ಡಿ, “ಎಂಸಿಡಿ, ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಗಳ ಫಲಿತಾಂಶವು ಮೂರು ಸಂದೇಶಗಳು ನೀಡಿದೆ. ಮೊದಲನೆಯದು, ಬಿಜೆಪಿಯನ್ನು ಸೋಲಿಸಲು ಆಮ್‌ ಆದ್ಮಿ ಪಾರ್ಟಿಗೆ ಸಾಧ್ಯವಿದೆ. ಎರಡನೆಯದು, ಕೇವಲ […]

Continue Reading

ಕೆಜಿಎಫ್ ನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಮಹಿಳೆಯ ಶವ ಪತ್ತೆ..!

ಬೆಂಗಳೂರು: ರೈಲಿನಲ್ಲಿ  ಅಪರಿಚಿತ ಮಹಿಳೆ ಶವ ಪತ್ತೆಯಾಗಿರುವ ಘಟನೆ ಸಂಬಂಧ ಬೈಯಪ್ಪನಹಳ್ಳಿ ರೈಲ್ವೆ  ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಕೆ ಜಿ ಎಫ್ ನಿಂದ ಬೆಂಗಳೂರು ಬರ್ತಿದ್ದ  ರೈಲಿನಲ್ಲಿ ಶವ ಪತ್ತೆ ಆಗಿದ್ದು, ಅಪರಿಚಿತರು ಮಹಿಳೆ ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಬೆಡ್ ಶೀಟ್ ಬಟ್ಟೆಗಳ ನಡುವೆ ಮೃತದೇಹವನ್ನ ತುಂಬಿ ರೈಲಿನಲ್ಲಿ ಬಿಸಾಕಿದ್ದಾರೆ. ಸದ್ಯ ಮೃತ ಮಹಿಳೆ ಯಾರು ಎಂಬುದು ಪತ್ತೆಯಾಗಿಲ್ಲ. ರೈಲು ಖಾಲಿ ಆಗಿದ್ರು ಚೀಲವನ್ನು ಯಾರು ತೆಗೆದುಕೊಳ್ಳದೆ ಇದ್ದಾಗ ಅನುಮಾನ ಬಂದು ರೈಲ್ವೆ ಪೊಲೀಸರಿಗೆ  […]

Continue Reading