PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಎಸ್​ಎಸ್​ಎಲ್​ಸಿಗೆ ಮೂರು ಬಾರಿ ಎಕ್ಸಾಂ ಮಾಡಲು ನಿರ್ಧಾರ – ಮಧು ಬಂಗಾರಪ್ಪ

September 24, 2023

ತುಳುವಿನಲ್ಲಿ ಒಡು ಪೊಗ್ಗುನಿ ಅನ್ನುತ್ತಾರೆ. ಜೆಡಿಎಸ್ ಎಲ್ಲೆಲ್ಲಿ ಹೋಗಿದ್ದಾರೊ ಅಲ್ಲಿ ಅದರ ಕಥೆ ಮುಗಿಯಿತು ಎಂದು ಲೆಕ್ಕ -ವೀರಪ್ಪ ಮೊಯ್ಲಿ

September 24, 2023

ಯೋಜನೆಗಳ ಹೆಸರಲ್ಲಿ ಕೊಳ್ಳೆ ಹೊಡೆಯುವ ಹುನ್ನಾರ ಕಾಂಗ್ರೆಸ್ ಸರ್ಕಾರದ್ದು – ಹೆಚ್ ಡಿಕೆ

September 24, 2023
Facebook Twitter Instagram
Sunday, September 24
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ಕಿಂಗ್ ಕೊಹ್ಲಿ ಶತಕದ ವೈಭವ – ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 88 ರನ್ ಮುನ್ನಡೆ
ಕ್ರೀಡೆ Prajatv KannadaBy Prajatv KannadaMarch 13, 2023

ಕಿಂಗ್ ಕೊಹ್ಲಿ ಶತಕದ ವೈಭವ – ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 88 ರನ್ ಮುನ್ನಡೆ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಅಹಮದಾಬಾದ್: ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಶತಕದ ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಭಾರತ 88 ರನ್‌ಗಳ ಮುನ್ನಡೆ ಸಾಧಿಸಿದೆ.

ಬಾರ್ಡರ್ ಗಾವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 4ನೇ ದಿನದಾಟದ ಅಂತ್ಯಕ್ಕೆ 178.5 ಓವರ್‌ಗಳಲ್ಲಿ 571 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 6 ಓವರ್‌ಗಳಲ್ಲಿ ಕೇವಲ 3 ರನ್ ಗಳಿಸಿ 88 ರನ್‌ಗಳ ಹಿನ್ನಡೆಯಲ್ಲಿದೆ.

 

ಆರಂಭಿಕರಾದ ಟ್ರಾವಿಸ್ ಹೆಡ್ (Travis Head) 18 ಎಸೆತಗಳಲ್ಲಿ 3 ರನ್ ಗಳಿಸಿದರೆ, ಮತ್ತೋರ್ವ ಆರಂಭಿಕ ಮ್ಯಾಥಿವ್ ಕುನ್ಹೆಮನ್ ಯಾವುದೇ ರನ್‌ಗಳಿಸದೇ ವಿಕೆಟ್ ಉಳಿಸಿಕೊಂಡಿದ್ದು, ಸೋಮವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

ಶತಕದ ಬರ ನೀಗಿಸಿಕೊಂಡ ಕೊಹ್ಲಿ: 4ನೇ ದಿನ ಆಸ್ಟ್ರೇಲಿಯಾ ವಿರುದ್ಧ ತಾಳ್ಮೆಯ ಆಟವಾಡಿದ ಕೊಹ್ಲಿ 1,205 ದಿನಗಳ ಬಳಿಕ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ತಮ್ಮ ವೃತ್ತಿಜೀವನದ 75ನೇ ಶತಕ ಪೂರ್ಣಗೊಳಿಸಿದರು.

3ನೇ ದಿನದ ಅಂತ್ಯಕ್ಕೆ 128 ಎಸೆತಗಳಲ್ಲಿ 59 ರನ್ ಗಳಿಸಿದ್ದ ಕೊಹ್ಲಿ 4ನೇ ದಿನ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. 4ನೇ ದಿನದಾಟದಲ್ಲಿ ಕೊಹ್ಲಿ 364 ಎಸೆತಗಳಲ್ಲಿ 15 ಬೌಂಡರಿಗಳೊಂದಿಗೆ 186 ರನ್ ಗಳಿಸಿದರೆ, ಜೊತೆಯಾಗಿ ಸಾಥ್ ನೀಡಿದ ಆಲ್‌ರೌಂಡರ್ ಅಕ್ಷರ್ ಪಟೇಲ್ (Axar Patel) 113 ಎಸೆತಗಳಲ್ಲಿ 79 ರನ್ (5 ಬೌಂಡರಿ, 4 ಸಿಕ್ಸರ್) ಬಾರಿಸಿದರು.

ರವೀಂದ್ರ ಜಡೇಜಾ 28 ರನ್, ಶ್ರೀಕರ್ ಭರತ್ 44 ರನ್, ರವಿಚಂದ್ರನ್ ಅಶ್ವಿನ್ 7 ರನ್ ಗಳಿಸಿದರೆ, ಉಮೇಶ್ ಯಾದವ್ ಒಂದು ಎಸೆತವನ್ನೂ ಎದುರಿಸದೇ ರನೌಟ್ ಆಗಿ ನಿರ್ಗಮಿಸಿದರು. ಮೊಹಮ್ಮದ್ ಶಮಿ ಅಜೇಯರಾಗುಳಿದರು.

ಆಸ್ಟ್ರೇಲಿಯಾ ತಂಡದ ಪರ ನಥನ್ ಲಿಯಾನ್ (Nathan Lyon), ಟಾಡ್ ಮರ್ಫಿ ತಲಾ 3 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್, ಮ್ಯಾಥಿವ್ ಕುನ್ಹೆಮನ್ ತಲಾ ಒಂದೊಂದು ವಿಕೆಟ್ ಪಡೆದರು.

 

Demo
Share. Facebook Twitter WhatsApp Pinterest LinkedIn Tumblr Telegram Email

Related Posts

ಭಾರತೀಯ ಏಷ್ಯನ್ ಗೇಮ್ಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಶಫಾಲಿ ವರ್ಮಾ

September 23, 2023

ಟೀಮ್ ಇಂಡಿಯಾ ಆಯ್ಕೆ ಮಾಡಿದ ಶ್ರೀಲಂಕಾ ದಿಗ್ಗಜ ಅರ್ಜುನ ರಣತುಂಗ

September 23, 2023

ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಜಯ

September 23, 2023

ಮಳೆಯಿಂದ ಭಾರತ-ಮಲೇಷ್ಯಾ ಪಂದ್ಯ ರದ್ದು, ರನ್ ರೇಟ್ ಆಧಾರಿಸಿ ಕ್ವಾರ್ಟರ್ ಫೈನಲ್‍ಗೆ ಟೀಂ ಇಂಡಿಯಾ

September 22, 2023

ಈ ಬಾರಿ ವಿಶ್ವಕಪ್‌ ಗೆಲ್ಲಲು ಕ್ರಿಕೆಟಿಗರ ಕಸರತ್ತು ಹೇಗಿದೆ ಗೊತ್ತಾ?

September 22, 2023

ಈ ಸಲ ವಿಶ್ವಕಪ್‌ ಸಿಗೋದು ಇವರಿಂದಲೇ: ಕ್ರಿಕೆಟ್‌ ದಿಗ್ಗಜರ ವಿಶ್ವಾಸ: ಯಾರಿದು?

September 22, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.