ಸಿಂಹ ಕಾಡಿಗೆ ರಾಜ… ದೂರದಲ್ಲಿ ಸಿಂಹದ ಗರ್ಜನೆ ಕೇಳಿದರೆ ಸಾಕು ಎಲ್ಲಾ ಪ್ರಾಣಿಗಳು ಅಡಗಿ ಕುಳಿತುಕೊಳ್ಳುತ್ತವೆ. ಸಿಂಹಗಳಿಗೆ ಆಹಾರವಾಗಬಾರದು ಎಂದು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಸಾಗುತ್ತವೆ. ಆದರೂ ಕೆಲ ಪ್ರಾಣಿಗಳು ತಮ್ಮ ಪ್ರಯತ್ನದಲ್ಲಿ ಕೈಸೋತು ಸಿಂಹಗಳಿಗೆ ಭರ್ಜರಿ ಭೋಜನವಾಗುತ್ತವೆ.
Video Player
00:00
00:25
ಆದರೆ, ಎಲ್ಲಾ ಸಂದರ್ಭದಲ್ಲೂ ಸಿಂಹಗಳೇ ಹೆದರಿಕೆ ಸೃಷ್ಟಿಸುತ್ತವೆ ಎಂದಲ್ಲ. ಕೆಲವೊಂದು ಸಲ ಸಿಂಹಗಳೂ ಜೀವ ಭಯದಲ್ಲಿ ಓಡುತ್ತವೆ. ಅದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಕಾಡಿನಲ್ಲಿದ್ದಾಗ ಸಿಂಹಗಳು ರಾಜ. ಆದರೆ, ನೀರಿಗಿಳಿದರೆ ಪರಿಸ್ಥಿತಿ ಬದಲಾಗುತ್ತದೆ. ನೀರಿನಲ್ಲಿ ಮೊಸಳೆ, ಕೆಲವೊಮ್ಮೆ ಹಿಪ್ಪೋಗಳು ಅಧಿಪತ್ಯ ಸಾಧಿಸುತ್ತವೆ. ನೀರಿನಲ್ಲಿ ಸಿಂಹಗಳಿಗೆ ತಮ್ಮ ಬಲ ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಸಿಂಹಗಳು ಜೀವ ಉಳಿಸಿಕೊಳ್ಳಲು ಓಡುತ್ತವೆ. ನೀವು ಕೂಡಾ ಇಂತಹ ಸಾಕಷ್ಟು ದೃಶ್ಯಗಳನ್ನು ನೋಡಿರಬಹುದು. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ.