ಬೆಂಗಳೂರು: ನೂತನ ಜನತಾ ರೈತ ಸಂಘವನ್ನು ನಿವೃತ್ತ ನ್ಯಾಯಮೂರ್ತಿಗಳಾದ ಡಾ.ಎ.ಗುರುಮೂರ್ತಿ, ನಿವೃತ್ತ DRDO ವಿಜ್ಞಾನಿಗಳಾದ ಡಾ.ಎನ್.ಪ್ರಭಾಕರನ್ ಉದ್ಘಾಟನೆ ಮಾಡಿದರು.
ರಾಮಮೂರ್ತಿನಗರದ ಖಾಸಗೀ ಹಾಲ್ ನಲ್ಲಿ ನಡೆದ ಜನತಾ ರೈತ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಡಾ.ಎ.ಗುರುಮೂರ್ತಿ, ಜನತಾ ರೈತ ಸಂಘ ಈಗಾಗಲೇ ರಾಜ್ಯಾಧ್ಯಂತ ಹೆಸರು ಮಾಡಿದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ನಿಲ್ಲಬೇಕು. ರೈತರಿಗೆ ಬೆಂಬಲ ಬೆಲೆ ಸಿಗುವ ನಿಟ್ಟಿನಲ್ಲಿ ಜನತಾ ರೈತ ಸಂಘ ಹೋರಾಟ ಮಾಡಬೇಕು. ಜನತಾ ರೈತ ಸಂಘದ ಒಳ್ಳೆಯ ತಂಡವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ದೇಶದಲ್ಲಿ ಹೆಸರು ಮಾಡಲಿ ಎಂದರು.
ನಿವೃತ್ತ DRDO ವಿಜ್ಞಾನಿ ಡಾ.ಎನ್.ಪ್ರಭಾಕರನ್ ಮಾತನಾಡಿ, ನಾನು ಕೂಡ ಕೃಷಿ ಕುಟುಂಬದಿಂದ ಬಂದವನು. ರೈತರ ಸಮಸ್ಯೆಗಳು ಬಹಳ ಇವೆ. ಇಲ್ಲೀಯವರೆಗೆ ಯಾರೂ ರೈತರ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಜನತಾ ರೈತ ಸಂಘ ರೈತರ ಸಮಸ್ಯೆ ಮೇಲೆ ಧ್ವನಿ ಎತ್ತಬೇಕು. ರೈತ ವರ್ಗದ ಸಮಸ್ಯೆಗಳನ್ನು ಜನತಾ ರೈತ ಸಂಘವು ಹೋರಾಟದ ಮುಖಾಂತರ ಬಗೆಹರಿಸಬೇಕು ಎಂದರು.
ಸಮಾಜ ಸೇವಕರಾದ ಡಿಎ ಗೋಪಾಲ್, ಪತ್ರಕರ್ತರು ಹಾಗು ಚಿಂತಕರಾದ ರಾ.ಚಿಂತನ್, ಜನತಾ ರೈತ ಸಂಘದ ಗೌರವಾಧ್ಯಕ್ಷ ಕಲ್ಕೆರೆ ಮಾರುತಿ, ರಾಜ್ಯಾಧ್ಯಕ್ಷ ಈರೇಗೌಡ, ರಾಜ್ಯ ಉಪಾಧ್ಯಕ್ಷರು ಹಾಗು ಖಜಾಂಚಿಗಳಾದ ಶ್ರೀನಿವಾಸ್ ಸುಬ್ಬು, ಕಾರ್ಯಾಧ್ಯಕ್ಷರಾದ ರಘು ಕೆಎನ್, ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ, ಯುವ ಘಟಕದ ಅಧ್ಯಕ್ಷ ಸತೀಶ್ ಗೌಡ, ಕಾರ್ಮಿಕ ಘಟಕದ ಅಧ್ಯಕ್ಷರಾದ ಮಹೇಶ್ ಸಿಂಹ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರೂಪಾ ಉಪಸ್ಥಿತರಿದ್ದರು.